ಒಂದೇ ಅನಾಥಾಶ್ರಮದ 210 ಮಂದಿಗೆ ಕೊರೊನಾ ಪಾಸಿಟಿವ್

covid 19
30/05/2021

ದಕ್ಷಿಣಕನ್ನಡ:  ಒಂದೇ ಅನಾಥಾಶ್ರಮದ 210 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ ಘಟನೆ ಜಿಲ್ಲೆಯ ಸಿಯೋನ್ ಅನಾಥಾಶ್ರಮದಲ್ಲಿ ಬೆಳಕಿಗೆ ಬಂದಿದೆ.  ಜಿಲ್ಲೆಯಲ್ಲಿ ವ್ಯಾಪಕವಾಗಿ ಕೊರೊನಾ ಹರಡುತ್ತಿದೆ. ಈ ನಡುವೆ ಈ ಘಟನೆ ಜಿಲ್ಲೆಯ ಜನತೆಗೆ ಬಿಗ್ ಶಾಕ್ ನೀಡಿದೆ.

ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ಗ್ರಾಮದಲ್ಲಿರುವ ಸಿಯೋನ್ ಅನಾಥಾಶ್ರಮದಲ್ಲಿ 270 ಮಂದಿಯಿದ್ದು, ಅವರಲ್ಲಿ 210 ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಂಕಿತರನ್ನು ರಜತಾದ್ರಿ ವಸತಿ ಗೃಹಕ್ಕೆ ಶಿಫ್ಟ್ ಮಾಡಲಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ರಜತಾದ್ರಿ ವಸತಿ ಗೃಹವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬದಲಾಯಿಸಲಾಗಿದ್ದು, ಅನಾಥಾಶ್ರಮದ 210 ಕೋವಿಡ್ ಸೋಂಕಿತರಿಗೆ ರಜತಾದ್ರಿ ವಸತಿ ಗೃಹದಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತೀಚಿನ ಸುದ್ದಿ

Exit mobile version