ನೀವು ಈ ಬ್ಯಾಂಕ್ ಗ್ರಾಹಕರಾಗಿದ್ದರೆ ಈ ಮಾಹಿತಿಯನ್ನು ತಿಳಿಯಲೇ ಬೇಕು
11/12/2020
ನವದೆಹಲಿ: ನಿಮ್ಮ ಖಾತೆಯಲ್ಲಿ ಹಣ ಇಲ್ಲದಿದ್ದರೆ, ನಿಮಗೇ ದಂಡ ವಿಧಿಸುವ ಬ್ಯಾಂಕ್ ಗಳ ಹಗಲು ದರೋಡೆ ಮುಂದುವರಿದಿದ್ದು, ಉಳಿತಾಯ ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಹೆಸರಿನಲ್ಲಿ ಗ್ರಾಹಕರ ಖಾತೆಗೆ ಬ್ಯಾಂಕ್ ಗಳು ಕನ್ನ ಹಾಕುತ್ತಿವೆ. ಈ ಸಾಂಕ್ರಾಮಿಕ ರೋಗ ಅಥವಾ ನಿಯಮ ಇದೀಗ ಅಂಚೆ ಕಚೇರಿಯ ಉಳಿತಾಯ ಖಾತೆಗಳಿಗೂ ಹರಡಿದೆ.
ಹೌದು..! ಡಿಸೆಂಬರ್ 11ರಿಂದ ಅಂಚೆ ಕಚೇರಿಯ ಉಳಿತಾಯ ಖಾತೆಗಳಲ್ಲಿ ಕನಿಷ್ಠ 500 ಇರಲೇ ಬೇಕು ಎಂಬ ಹೊಸ ನಿಯಮ ತರಲಾಗಿದೆ. ಒಂದು ವೇಳೆ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ, ಖಾತೆ ನಿರ್ವಹಣೆ ಶುಲ್ಕ ಹೆಸರಿನಲ್ಲಿ 100 ರೂಪಾಯಿಗಳನ್ನು ಕಡಿತಗೊಳಿಸಲಾಗುವುದು ಎಂದು ಬ್ಯಾಂಕ್ ತನ್ನ ಹೊಸ ನಿಯಮದಲ್ಲಿ ಉಲ್ಲೇಖಿಸಿದೆ.
ಖಾತೆ ತೆರೆಯಲು ಕೂಡ 500 ರೂ. ಪಾವತಿಸಬೇಕು. 10 ರೂಪಾಯಿಗಳಿಗಿಂತ ಕಡಿಮೆ ಮೊತ್ತವನ್ನು ಜಮೆ ಮಾಡುವಂತಿಲ್ಲ. ಕನಿಷ್ಠ ವಿಥ್ ಡ್ರಾ ಮಾಡುವ ಮೊತ್ತ 50 ರೂ. ಆದರೆ ಕನಿಷ್ಠ ಬ್ಯಾಲೆನ್ಸ್ 500 ರೂ. ಇರಲೇಬೇಕು ಎಂದು ಅಂಚೆ ಇಲಾಖೆ ತಿಳಿಸಿದೆ.