100ಕ್ಕೂ ಅಧಿಕ ಪ್ರಾಚೀನ ನಿಧಿಗಳು ಪತ್ತೆ | ಪ್ರಾಚೀನ ದೇವತೆಗಳ ಮೂರ್ತಿ, ಮುಖವಾಡ, “ಮಮ್ಮಿ” ಪತ್ತೆ - Mahanayaka

100ಕ್ಕೂ ಅಧಿಕ ಪ್ರಾಚೀನ ನಿಧಿಗಳು ಪತ್ತೆ | ಪ್ರಾಚೀನ ದೇವತೆಗಳ ಮೂರ್ತಿ, ಮುಖವಾಡ, “ಮಮ್ಮಿ” ಪತ್ತೆ

15/11/2020

ಸಕ್ಕಾರಾ: ಈಜಿಫ್ಟ್ ಶನಿವಾರ ಸುಮಾರು 100ಕ್ಕೂ ಅಧಿಕ ಪ್ರಾಚೀನ ನಿಧಿಯನ್ನು ಸಂಗ್ರಹಿಸಿರುವುದಾಗಿ ಘೋಷಿಸಿದ್ದು, ಪ್ರತಿ ವರ್ಷವೂ ನಿಧಿ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡುವ ಈಜಿಫ್ಟ್ ಈ ವರ್ಷ ಬಹಳ ದೊಡ್ಡ ಪ್ರಮಾಣದ ನಿಧಿಗಳನ್ನು ಸಂಗ್ರಹಿಸಿದೆ.

ಪ್ರಾಚೀನ ಈಜಿಪ್ಟಿನ ಟೋಲೆಮಿಕ್ ಅವಧಿಯ ಶವ ಪೆಟ್ಟಿಗೆಗಳೂ, ಮೂರ್ತಿಗಳನ್ನು ಈಜೆಫ್ಟ್ ಪತ್ತೆ ಹಚ್ಚಿದೆ. ಕೈರೋದ ದಕ್ಷಿಣಕ್ಕೆ ವ್ಯಾಪಿಸಿರುವ ಸಕ್ಕರಾ ನೆಕ್ರೋಪೊಲಿಸ್‌ನಲ್ಲಿ 12 ಮೀಟರ್ (40 ಅಡಿ) ಆಳದ ಮೂರು ಸಮಾಧಿಯನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಈ ಸಮಾಧಿಯಲ್ಲಿ ಬಣ್ಣದ ಚಿತ್ರಲಿಪಿಗಳಿಂದ ಅಲಂಕರಿಸಲಾಗಿರುವ ಸುಂದರವಾದ ಶವಪೆಟ್ಟಿಗೆಯಲ್ಲಿ “ಮಮ್ಮಿ”(ಪ್ರಾಚೀನ ಕಾಲದ ಮೃತದೇಹ) ಪತ್ತೆಯಾಗಿದೆ. ಪತ್ತೆಯಾದ ಮೂರು ಪೆಟ್ಟಿಗೆಗಳ ಪೈಕಿ ಒಂದು ಪಟ್ಟಿಗೆಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೇ ಅಧಿಕಾರಿಗಳು ರಹಸ್ಯ ಕಾಪಾಡಿಕೊಂಡಿದ್ದಾರೆ. ಪುರಾತತ್ತ್ವಜ್ಞರು 2,500 ವರ್ಷಗಳ ಹಿಂದೆ 59 ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಮತ್ತು ಮೊಹರು ಮಾಡಿದ ಮರದ ಶವಪೆಟ್ಟಿಗೆಗಳನ್ನು ಪತ್ತೆಮಾಡಿದ ನಂತರ, ಕೇವಲ ಒಂದು ತಿಂಗಳ ಅವಧಿಯಲ್ಲಿ  ಬೃಹತ್ ನಿಧಿಗಳನ್ನು ಪತ್ತೆ ಮಾಡಿದ್ದಾರೆ.

ಪ್ರವಾಸೋದ್ಯಮ ಸಚಿವ ಖಲೀದ್ ಅಲ್-ಅನನಿ ಅನಾವರಣ ಸಮಾರಂಭದಲ್ಲಿ ಈಜಿಫ್ಟ್ ಪತ್ತೆ ಹಚ್ಚಿದ ನಿಧಿಗಳ ಬಗ್ಗೆ ಮಾಹಿತಿ ನೀಡಿದರು. ಈಗಾಗಲೇ ಪತ್ತೆ ಮಾಡಲಾಗಿರುವ ನಿಧಿಗಳು ಮಾತ್ರವಲ್ಲ, ಇನ್ನೂ ಉತ್ಕನನಗಳು ನಡೆಯುತ್ತಿವೆ. ಒಂದು ಸಮಾಧಿಯನ್ನು ಪರಿಶೀಲನೆ ನಡೆಸುತ್ತಿರುವಾಗಲೇ ಇನ್ನೊಂದು ಸಮಾಧಿಗಳು ಪತ್ತೆಯಾಗುತ್ತಿವೆ. ಜೊತೆಗೆ ಪ್ರಾಚೀನ ದೇವತೆಗಳ 40ಕ್ಕೂ ಅಧಿಕ ಪ್ರತಿಮೆಗಳು, ಮುಖವಾಡಗಳು ಪತ್ತೆಯಾಗಿವೆ. ವಿಶಾಲವಾದ ನೆಕ್ರೋಪೊಲಿಸ್‌ ನಲ್ಲಿನ ಮತ್ತೊಂದು ಆವಿಷ್ಕಾರವನ್ನು ಮುಂದಿನ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ.




ಇತ್ತೀಚಿನ ಸುದ್ದಿ