4.3 ಕೋಟಿ ವರ್ಷಗಳ ಹಿಂದಿನ ನಾಲ್ಕು ಕಾಲಿನ ಬೃಹತ್ ತಿಮಿಂಗಲ ಪತ್ತೆ! - Mahanayaka
3:08 AM Thursday 19 - September 2024

4.3 ಕೋಟಿ ವರ್ಷಗಳ ಹಿಂದಿನ ನಾಲ್ಕು ಕಾಲಿನ ಬೃಹತ್ ತಿಮಿಂಗಲ ಪತ್ತೆ!

ancient whale that had four legs
16/09/2021

ಸುಮಾರು 4.3 ಕೋಟಿ ವರ್ಷಗಳಷ್ಟು ಹಿಂದಿನ ಹಳೆಯ ಬೃಹತ್ ಜೀವಿಯೊಂದರ ಪಳೆಯುಳಿಕೆ ಪತ್ತೆಯಾಗಿದ್ದು,  ಈಜಿಫ್ಟಿಯನ್ ವಿಜ್ಞಾನಿಗಳು ಇದನ್ನು ಪತ್ತೆ ಮಾಡಿದ್ದಾರೆ. ಇದು ಇತಿಹಾಸ ಪೂರ್ವ ಕಾಲಘಟ್ಟಕ್ಕೆ ಸೇರಿದ ಜೀವಿಯಾಗಿದ್ದು, ಬೇಟೆಗಾರನ ಎಲ್ಲ ಲಕ್ಷಣಗಳು ಈ ಜೀವಿಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈಜಿಫ್ಟ್ ನ ಮರು ಭೂಮಿ ಪ್ರದೇಶದ ಪಶ್ಚಿಮ ಭಾಗದಲ್ಲಿ ಈ ಅಸ್ತಿ ಪಂಜರ ಪತ್ತೆಯಾಗಿದ್ದು, ಇದು ನಾಲ್ಕು ಕಾಲುಗಳನ್ನು ಒಳಗೊಂಡಿರುವ ಬೃಹತ್ ಆಕಾರದ ತಿಮಿಂಗಿಲವಾಗಿದ್ದು, ನೀರು ಹಾಗೂ ಭೂಮಿ ಎರಡರಲ್ಲೂ ಜೀವಿಸುವ ಸಾಮರ್ಥ್ಯವನ್ನು ಈ  ತಿಮಿಂಗಿಲ ಹೊಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

2008ರಲ್ಲಿ  ಈಜಿಫ್ಟಿಯನ್ ಪರಿಸರ ವಾದಿಗಳು ಮೊದಲ ಬಾರಿಗೆ ಈ ಅಸ್ಥಿ ಪಂಜರವನ್ನು ಕಂಡು ಹಿಡಿದಿದ್ದರು. ಈ ಬಗ್ಗೆ ಅಧ್ಯಯನ ನಡೆಸಿದ ಸಂಶೋಧಕರು ಈ ಹೊಸ ತಳಿಯ ತಿಮಿಂಗಿಲ ಜೀವಿಯ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದ್ದಾರೆ.


Provided by

ಈ ಅಸ್ಥಿ ಪಂಜರವು ತಿಮಿಂಗಿಲಗಳ ಉಗಮ ಹಾಗೂ ವಿಕಾಸದ ಬಗೆಗಿನ ಅಧ್ಯಯನಕ್ಕೆ  ನೆರವಾಗಲಿದೆ. ಇಂದಿಗೂ ತಿಮಿಂಗಿಲಗಳು ಬೃಹದಾಕಾರವಾಗಿದೆ. ಆದರೆ, ಈಗಿನ ತಿಮಿಂಗಿಲ ನೀರಿನಲ್ಲಿಯೇ ವಾಸಿಸುತ್ತದೆ. ಆದರೆ, 4.3 ಕೋಟಿ ವರ್ಷಗಳ ಹಿಂದಿನ ತಿಮಿಂಗಿಲಗಳು ನೀರು ಮತ್ತು ಭೂಮಿ ಎರಡಲ್ಲೂ ಬದುಕಿದ್ದವು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ಇನ್ನಷ್ಟು ಸುದ್ದಿಗಳು…

ಶಾಕಿಂಗ್ ನ್ಯೂಸ್: ಭಾರತದಲ್ಲಿ ಪ್ರತಿದಿನ 80 ಕೊಲೆ, 77 ಅತ್ಯಾಚಾರ ಪ್ರಕರಣಗಳು ದಾಖಲಾಗ್ತಿವೆ!]

ಕಬಡ್ಡಿ ತರಬೇತಿ ಕೇಂದ್ರದಲ್ಲಿ ತಂದೆ, ಮಗನಿಂದ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ!

ಜನರ ಭಾವನೆಗಳನ್ನು ಕೆಡವಿದವರು ಈಗ ದೇವಸ್ಥಾನವನ್ನೂ ಕೆಡವಿದ್ದಾರೆ | ಯು.ಟಿ.ಖಾದರ್ ಆಕ್ರೋಶ

ಕಲಾಪದ ವೇಳೆ ಕೊನೆಯ ಸೀಟಿನಲ್ಲಿ ಕುಳಿತು ಮೌನಕ್ಕೆ ಜಾರಿದ ಮಾಜಿ ಸಿಎಂ ಯಡಿಯೂರಪ್ಪ

ಅವಸರದಿಂದ ದೇವಸ್ಥಾನಗಳನ್ನು ಒಡೆಯಬೇಡಿ: ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ

ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆದ್ದರೂ, ವಿರೋಧ ಪಕ್ಷದಲ್ಲಿಯೇ ಕೂರಿಸುತ್ತೇನೆ | ಯಡಿಯೂರಪ್ಪ

ಇತ್ತೀಚಿನ ಸುದ್ದಿ