ಅಂಧರು ಗುರುತಿಸುವಂತಹ ವಿನ್ಯಾಸದ ಹೊಸ ನಾಣ್ಯ ಬಿಡುಗಡೆ - Mahanayaka
3:09 AM Thursday 19 - September 2024

ಅಂಧರು ಗುರುತಿಸುವಂತಹ ವಿನ್ಯಾಸದ ಹೊಸ ನಾಣ್ಯ ಬಿಡುಗಡೆ

modi
07/06/2022

ಕೇಂದ್ರ ಸರ್ಕಾರ ಹೊಸ ನಾಣ್ಯಗಳನ್ನು ಬಿಡುಗಡೆ ಮಾಡಿದೆ.  ಆಜಾದಿ ಕಾ ಅಮೃತ್ ಮಹೋತ್ಸವ (AKAM) ಅಂಗವಾಗಿ ಕೇಂದ್ರ ಸರ್ಕಾರವು ಈ ನಾಣ್ಯಗಳನ್ನು ಬಿಡುಗಡೆ ಮಾಡಿದೆ. ನರೇಂದ್ರ ಮೋದಿ ಅವರು ವಿಶೇಷ ಸರಣಿಯ ನಾಣ್ಯಗಳನ್ನು ಬಿಡುಗಡೆ ಮಾಡಿದರು.

ನವದೆಹಲಿಯ ವಿಜ್ಞಾನ ಭವನದಲ್ಲಿ ಹಣಕಾಸು ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಣ್ಯವನ್ನು ಅನಾವರಣಗೊಳಿಸಲಾಯಿತು.  ಅಂಧರು ಗುರುತಿಸುವಂತೆ ನಾಣ್ಯಗಳನ್ನು ವಿನ್ಯಾಸಗೊಳಿಸಲಾಗಿದೆ.  ನಾಣ್ಯವು AKAM ಲೋಗೋವನ್ನು ಸಹ ಒಳಗೊಂಡಿದೆ.

ಈ ಹಿಂದೆ 400ನೇ ಪ್ರಕಾಶ್ ಪುರಬ್ ಆಚರಣೆಯ ಅಂಗವಾಗಿ ದೇಶದಲ್ಲಿ 400 ರೂಪಾಯಿ ನಾಣ್ಯ ಬಿಡುಗಡೆ ಮಾಡಲಾಗಿತ್ತು.  ಒಂಬತ್ತನೇ ಸಿಖ್ ಗುರು ತೇಜ್ ಬಹದ್ದೂರ್ ಅವರ ಜನ್ಮದಿನದಂದು ಕೆಂಪು ಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 400 ರೂಪಾಯಿ ನಾಣ್ಯವನ್ನು ಅನಾವರಣಗೊಳಿಸಲಾಗಿತ್ತು.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪ್ರವಾದಿ ವಿರುದ್ಧ ಹೇಳಿಕೆ: ಭಾರತದ ಉತ್ಪನ್ನಗಳನ್ನು ತೆಗೆದು ಹಾಕಿದ ಕುವೈತ್ ಸೂಪರ್ ಮಾರ್ಕೆಟ್!

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ ಯಾತ್ರಿಕರ ಕಾರು ಸೇತುವೆಗೆ ಡಿಕ್ಕಿ: ಇಬ್ಬರು ಸಾವು

ವಿದ್ಯುತ್ ಕಂಬಕ್ಕೆ ದನದ ಬುರುಡೆ ಕಟ್ಟಿದ ಕಿಡಿಗೇಡಿಗಳು!

ದಕ್ಷಿಣ ಕನ್ನಡದ ಸುಳ್ಯದಲ್ಲಿ ಯುವಕನ ಮೇಲೆ ಗುಂಡಿನ ದಾಳಿ

ಇತ್ತೀಚಿನ ಸುದ್ದಿ