ಗರ್ಭಿಣಿ ಪತ್ನಿಯನ್ನು ತುಂಡಾಗಿ ಕತ್ತರಿಸಿ ಡ್ರಮ್ ನಲ್ಲಿ ಬಚ್ಚಿಟ್ಟ ಪತಿ: 1 ವರ್ಷದ ಬಳಿಕ ಘಟನೆ ಬೆಳಕಿಗೆ - Mahanayaka
8:27 PM Wednesday 11 - December 2024

ಗರ್ಭಿಣಿ ಪತ್ನಿಯನ್ನು ತುಂಡಾಗಿ ಕತ್ತರಿಸಿ ಡ್ರಮ್ ನಲ್ಲಿ ಬಚ್ಚಿಟ್ಟ ಪತಿ: 1 ವರ್ಷದ ಬಳಿಕ ಘಟನೆ ಬೆಳಕಿಗೆ

andhra
05/12/2022

ವಿಶಾಖಪಟ್ಟಣಂ: ಒಂದು ವರ್ಷದ ಹಿಂದೆ ಮಹಿಳೆಯೊಬ್ಬರನ್ನು ಬಾಡಿಗೆ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಡ್ರಮ್ ನಲ್ಲಿ ಬಚ್ಚಿಟ್ಟ ಭೀಕರ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.

2021ರ ಜೂನ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಬಾಡಿಗೆದಾರ, ತನ್ನ ಪತ್ನಿ ಗರ್ಭಿಣಿ ಅನ್ನೋ ಕಾರಣ ನೀಡಿ ಬಾಡಿಗೆ ಮನೆಯಿಂದ ತೆರಳಿದ್ದ. ಆ ಬಳಿಕ ಆಗಾಗ ಮನೆಗೆ ಬಂದು ಹೋಗುತ್ತಿದ್ದ.  ಈ ನಡುವೆ 1 ವರ್ಷದಿಂದ ಬಾಡಿಗೆದಾರ ಬಾಡಿಗೆಯನ್ನು ಪಾವತಿಸದೇ ಇರುವುದರಿಂದ ಬೇಸತ್ತ ಮನೆ ಮಾಲಿಕರು ಮನೆಯ ಬಾಗಿಲು ಒಡೆದು ಒಳಗೆ ಹೀಗಿದ್ದು, ಈ ವೇಳೆ ಡ್ರಮ್ ನಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿವೆ.

ಒಂದು ವರ್ಷದ ಹಿಂದೆ ದೇಹವನ್ನು ತುಂಡಾಗಿ ಕತ್ತರಿಸಿ ಡ್ರಮ್ ನಲ್ಲಿ ಬಚ್ಚಿಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಬಾಡಿಗೆದಾರ ವ್ಯಕ್ತಿಯ ಪತ್ನಿಯ ಮೃತದೇಹ ಇದಾಗಿರಬಹುದು ಎಂದು ಶಂಕಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ