ಕೊರೊನಾ ಸೋಂಕಿತ ದಂಪತಿಯನ್ನು ಮನೆಗೊಳಗೆ ಕೂಡಿ ಹಾಕಿ ಬೀಗ ಜಡಿದ ಅಪಾರ್ಟ್ ಮೆಂಟ್ ನ ದುಷ್ಟರು! - Mahanayaka

ಕೊರೊನಾ ಸೋಂಕಿತ ದಂಪತಿಯನ್ನು ಮನೆಗೊಳಗೆ ಕೂಡಿ ಹಾಕಿ ಬೀಗ ಜಡಿದ ಅಪಾರ್ಟ್ ಮೆಂಟ್ ನ ದುಷ್ಟರು!

apartment lockd
20/04/2021

ಆಂಧ್ರಪ್ರದೇಶ: ಕೊರೊನಾ ಸೋಂಕಿತರಾದರೂ ಆಗಬಹುದು, ಆದರೆ ತಲೆಯೊಳಗೆ ವಿಪರೀತ ಸ್ವಾರ್ಥ ತುಂಬಿಕೊಂಡು ಮನುವಾದಿಗಳಂತೆ ವರ್ತಿಸುವವರಿಗೆ ಏನೆನ್ನಬೇಕು? ಇಲ್ಲೊಂದು ಘಟನೆಯನ್ನು ನೋಡಿದರೆ ಎಂತವರಿಗಾದರೂ ಕರುಳು ಚುರ್ ಎನ್ನಬಹುದು.

ಹೌದು..! ಕೊರೊನಾ ಸೋಂಕಿತ ದಂಪತಿಯ ಮನೆಗೆ ಲಾಕ್ ಮಾಡಿ ವಿಕೃತಿ ಮರೆಯಲಾಗಿರುವ ಘಟನೆ ಆಂಧ್ರಪ್ರದೇಶದ ನೆಲೋರ್ ನಗರದಲ್ಲಿ ನಡೆದಿದ್ದು, ಮನೆಯನ್ನು ಲಾಕ್ ಮಾಡಿ, ಅಮಾನವೀಯತೆ ಮೆರೆದಿದ್ದಾರೆ.

ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸಿಸುತ್ತಿದ್ದ ದಂಪತಿಗೆ 10 ದಿನಗಳ ಹಿಂದೆ ಕೊರೊನಾ ಪಾಸಿಟಿವ್ ರಿಪೋರ್ಟ್  ಬಂದಿತ್ತು.  ಹೀಗಾಗಿ ಅವರು ಅಗತ್ಯ ವಸ್ತುಗಳನ್ನು ತಮ್ಮ ಸಂಬಂಧಿಕರಿಂದ ತರಿಸಿಕೊಳ್ಳುತ್ತಿದ್ದರು.

ನಿನ್ನೆ ರಾತ್ರಿ ವೇಳೆ ಈ ಮನೆಯವರಿಗೆ ಅಗತ್ಯವಾಗಿ ಔಷಧಿ ಬೇಕಿತ್ತು. ಈ ಸಮಯದಲ್ಲಿ ಯಾರು ಕೂಡ ಲಭ್ಯವಾಗಲಿಲ್ಲ ಎನ್ನುವ ಕಾರಣಕ್ಕೆ ಪತಿ ಮನೆಯಿಂದ ಹೊರಗೆ ಸುರಕ್ಷತೆ ಕ್ರಮಗಳನ್ನು ತೆಗೆದುಕೊಂಡು ಹೋಗಿ ಬಂದಿದ್ದಾರೆ.

ದಂಪತಿಯ ಸಹಾಯಕ್ಕೆ ಅಪಾರ್ಟ್ ಮೆಂಟ್ ನಲ್ಲಿದ್ದ ಒಬ್ಬರೂ ಬಂದಿರಲಿಲ್ಲ. ಆದರೆ,  ಇವರು ತಮ್ಮ ಅಗತ್ಯ ಔಷಧಿ ತೆಗೆದುಕೊಳ್ಳಲು ಹೋಗಿದ್ದನ್ನು ಕಂಡು ತಮಗೂ ಕೊರೊನಾ ಬರಬಹುದು ಎಂದು ಬೆಳಗ್ಗೆ ಕೊರೊನಾ ಸೋಂಕಿತರ ಮನೆ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಲಾಕ್ ನ್ನು ಮುರಿದು ಹಾಕಿದ್ದಾರೆ. ಜೊತೆಗೆ ಬಾಗಿಲು ಲಾಕ್ ಮಾಡಿದವರನ್ನು ತರಾಟೆಗೆತ್ತಿಕೊಂಡಿದ್ದಾರೆ. ಈ ಘಟನೆ ನೋಡಿ, ಈ ರೀತಿಯೂ ಯೋಚಿಸುವ ಜನರು ಇದ್ದಾರೆಯೇ? ಇವರೆಲ್ಲ ನಾವು ಪರ್ಮನೆಂಟ್ ಭೂಮಿ ಮೇಲೆ ಗೂಟ ಹಾಕಿಕೊಂಡು ಇರುತ್ತೇವೆ ಎಂದು ಕೊಂಡಿದ್ದಾರೆಯೇ? ಎನ್ನುವ ಪ್ರಶ್ನೆಗಳನ್ನು ಜನರು  ಕೇಳುತ್ತಿದ್ದಾರೆ.

ಇತ್ತೀಚಿನ ಸುದ್ದಿ