ಆನೆಕಾಲು ರೋಗ ತಡೆ ಮಾತ್ರೆ ಸೇವನೆ: 19 ವಿದ್ಯಾರ್ಥಿಗಳು ಅಸ್ವಸ್ಥ - Mahanayaka
9:30 PM Wednesday 5 - February 2025

ಆನೆಕಾಲು ರೋಗ ತಡೆ ಮಾತ್ರೆ ಸೇವನೆ: 19 ವಿದ್ಯಾರ್ಥಿಗಳು ಅಸ್ವಸ್ಥ

aanekaalu
24/02/2022

ಬೀದರ್: ಆನೆಕಾಲು ರೋಗದ ತಡೆ ಮಾತ್ರೆ ಸೇವಿಸಿ 19 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ದಾಬಕಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಗ್ರಾಮದ ಆರೋಗ್ಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ದಾಬಕಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಆನೆಕಾಲು ರೋಗ ತಡೆ ಮಾತ್ರೆ ವಿತರಿಸಿದ್ದರು.

ಮಾತ್ರೆ ಸೇವಿಸಿದ ಬಳಿಕ ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು, ತಲೆ ಸುತ್ತು ಕಾಣಿಸಿಕೊಂಡಿದೆ. ತಕ್ಷಣವೇ ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಶಾಲೆಯ ಶಿಕ್ಷಕರು ಆಸ್ಪತ್ರೆಗೆ ದಾಖಲಿಸಿದ್ದು, ದಾಬಕಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

 ಹರ್ಷ ಕೊಲೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ; ಬಂಧಿತರ ಸಂಖ್ಯೆ 8ಕ್ಕೆ ಏರಿಕೆ

ಕಟ್ಟಿಗೆ ಸಂಗ್ರಹಿಸುತ್ತಿದ್ದ ಮಹಿಳೆಯ ಮಾನಭಂಗಕ್ಕೆ ಯತ್ನ

ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಆರೋಪ: ಪಿ ಆರ್‌ ಓ ವಜಾಕ್ಕೆ ಆಗ್ರಹಿಸಿ ಧರಣಿ

ಪ್ರಿಯಕರನೊಂದಿಗೆ ವಿರಸ: ಫೋನ್ ​ನಲ್ಲಿ ಮಾತನಾಡುತ್ತಲೇ ನೇಣು ಬಿಗಿದು ಆತ್ಮಹತ್ಯೆಗೈದ ಯುವತಿ

ರಷ್ಯಾ ಶೆಲ್ ದಾಳಿಗೆ 7 ಮಂದಿ ಸಾವು, 9 ಮಂದಿಗೆ ಗಾಯ: ಉಕ್ರೇನ್

 

ಇತ್ತೀಚಿನ ಸುದ್ದಿ