ಅಂಜನಾದ್ರಿ ಬೆಟ್ಟದಿಂದ ಅಂಗಡಿ ತೆರವು ಮಾಡಲು ಅನ್ಯ ಧರ್ಮೀಯರಿಗೆ ಬೆದರಿಕೆ: ಅತುಲ್ ಕುಮಾರ್ ವಿರುದ್ಧ ಎಫ್ ಐಆರ್

atul kumar
02/10/2021

ಕೊಪ್ಪಳ:  ಅನ್ಯ ಧರ್ಮೀಯರು ಅಂಜನಾದ್ರಿ ಬೆಟ್ಟದ ದ್ವಾರದಲ್ಲಿ ಅಂಗಡಿ ಇರಬಾರದು ಎಂದು ಬೈದಾಡಿದ ಹಿನ್ನೆಲೆಯಲ್ಲಿ ಅತುಲ್ ಕುಮಾರ್ ಎಂಬಾತನ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಕೊಪ್ಪಳದ ಅಂಜನಾದ್ರಿ ಬೆಟ್ಟದ ದ್ವಾರದಲ್ಲಿ ಕೂಗಾಡಿದ್ದ ಅತುಲ್ ಕುಮಾರ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.  ಈ ಹಿನ್ನೆಲೆಯಲ್ಲಿ ಕೊಪ್ಪಳದ ಗಂಗಾವತಿ ತಹಸೀಲ್ದಾರ್ ದೂರು ನೀಡಿದ್ದು, ಈ ಸಂಬಂಧ ಕಲಂ 153, 503, 504ರ ಅಡಿಯಲ್ಲಿ ದೂರು ದಾಖಲಾಗಿದೆ.

ಅತುಲ್ ಕುಮಾರ್ ಅನ್ಯ ಧರ್ಮೀಯರಿಗೆ ಮಾತ್ರವಲ್ಲ, ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಎಸ್ ಪಿಗೂ ಎಚ್ಚರಿಕೆ ನೀಡಿದ್ದ ಎಂದು ಹೇಳಲಾಗಿದೆ. ಅತುಲ್ ಕುಮಾರ್  ವಿಡಿಯೋ ವೈರಲ್ ಆದ ಬೆನ್ನಲ್ಲೇ ಆತನ ವಿರುದ್ಧ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂದ ಹಾಗೆ ಅತುಲ್ ಕುಮಾರ್ ಗೆ ಇದು ಮೊದಲ ಪ್ರಕರಣವಲ್ಲ, ಈ ಹಿಂದೆ ಮುಸ್ಲಿಮ್ ಧರ್ಮದ ಪ್ರವಾದಿಯ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ್ದಕ್ಕೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.  ಆದರೆ, ಆತನ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ಸಮಾಜದ ಶಾಂತಿ ಕದಡುವ ಹೇಳಿಕೆ ನೀಡುತ್ತಾಲೇ ಇದ್ದಾನೆ ಎಂಬ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಶಾಕಿಂಗ್ ನ್ಯೂಸ್: ರೇಬಿಸ್  ವೈರಸ್ ಗೆ ಕಾಲೇಜು ವಿದ್ಯಾರ್ಥಿನಿ ಬಲಿ

ಅಸ್ಪೃಶ್ಯತೆಯನ್ನು ಮುಚ್ಚಿಟ್ಟು ಮತಾಂತರದ ಹಿಂದೆ ಬಿದ್ದ ಬಿಜೆಪಿ ಪರಿವಾರ!

ಮಂಗಳೂರು: ಹೆಡ್ ಕಾನ್ ಸ್ಟೇಬಲ್ ಸಿದ್ಧಾರ್ಥ್ ಜೆ. ಹೃದಯಾಘಾತದಿಂದ ನಿಧನ

ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ ‘ಜೈ ಭೀಮ್’ ಬಹುನಿರೀಕ್ಷಿತ ಚಿತ್ರ

ಡ್ರಾಪ್ ಕೊಡುವ ನೆಪದಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ | ಐವರು ಅರೆಸ್ಟ್

ನೆಹರೂ ಒಪ್ಪಿದ್ದ ಆರೆಸ್ಸೆಸ್ ನ್ನು  ಕಾಂಗ್ರೆಸ್ ಒಪ್ಪಿಕೊಳ್ಳಲಿ | ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ

ಕಾಂಗ್ರೆಸ್ ಇಲ್ಲದೇ ದೇಶ ಉಳಿಯಲ್ಲ ಅನ್ನೋದು ಅಸತ್ಯ, ಭಟ್ಟಂಗಿತನ: ಕನ್ಹಯ್ಯ ಕುಮಾರ್ ವಿರುದ್ಧ ನಟ ಚೇತನ್ ಆಕ್ರೋಶ

ಇತ್ತೀಚಿನ ಸುದ್ದಿ

Exit mobile version