ಅಂಗಡಿಗೆ ನುಗ್ಗಿ 2 ಗೋಣಿ ಸಿಗರೇಟ್. ಗುಟ್ಕಾ ಕಳವು ಮಾಡಿದ ಕಳ್ಳರು! - Mahanayaka
9:18 AM Tuesday 24 - December 2024

ಅಂಗಡಿಗೆ ನುಗ್ಗಿ 2 ಗೋಣಿ ಸಿಗರೇಟ್. ಗುಟ್ಕಾ ಕಳವು ಮಾಡಿದ ಕಳ್ಳರು!

krishnanagara
23/09/2021

ಪುತ್ತೂರು: ಕೊವಿಡ್ ಆರ್ಥಿಕ ಸಂಕಷ್ಟದ ನಡುವೆಯೇ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಪುತ್ತೂರಿನಲ್ಲಿ ಸರಣಿ ಅಂಗಡಿ ಕಳ್ಳತನ ನಡೆಸಲಾಗಿದ್ದು, ಉಪ್ಪಿನಂಗಡಿ ಪುತ್ತೂರು ರಸ್ತೆಯ ಕೃಷ್ಣ ನಗರ ಚರ್ಚ್ ಬಳಿಯ ಅಂಗಡಿಗಳಲ್ಲಿ ಕಳವು ನಡೆದಿರುವ ವಿಚಾರ ಇಂದು ಬೆಳಕಿಗೆ ಬಂದಿದೆ.

ಕೃಷ್ಣನಗರದಲ್ಲಿರುವ ಗೋಪಾಲ ಎಂಬವರಿಗೆ ಸೇರಿದ ಅಂಗಡಿಯ ಪಕ್ಕದಲ್ಲಿರುವ ಮರ ಏರಿ ಶೀಟ್ ಜಾರಿಸಿ ಅಂಗಡಿಯೊಳಗೆ ದಾಸ್ತಾನು ಇಟ್ಟಿದ್ದ 2 ಗೋಣಿ  ಸಿಗರೇಟು ಪ್ಯಾಕೇಟ್ ಗಳು ಮತ್ತು ಗುಟ್ಕಾ ಹಾಗೂ ಡ್ರಾವರ್ ನಲ್ಲಿದ್ದ ಚಿಲ್ಲರೆ ಹಣವನ್ನು ಕೂಡ ಕಳ್ಳರು ಕಳವು ಮಾಡಿದ್ದಾರೆ.

ಇದೇ ಅಂಗಡಿಯ ಸಮೀಪದಲ್ಲಿರುವ ಲತೀಫ್ ಎಂಬವರ ತರಕಾರಿ ಅಂಗಡಿಯ ರೋಲಿಂಗ್ ಶೆಟರ್ ಮೂಲಕ ಒಳನುಗ್ಗಿದ ಕಳ್ಳರು ಡಬ್ಬದಲ್ಲಿಟ್ಟಿದ್ದ 300 ರೂಪಾಯಿಯನ್ನು ಕೂಡ ಕಳವು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on

ಇನ್ನಷ್ಟು ಸುದ್ದಿಗಳು…

ಗೋಬಿ ಮಂಚೂರಿ, ಎಗ್ ರೈಸ್ ಕೊಡಿಸುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ!

ಪೂಜೆ ಮುಗಿಸಿ ಮನೆಗೆ ಹೋಗುತ್ತಿದ್ದ ಅರ್ಚಕನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ!

ಮದುವೆಯಾದ ಕೆಲವೇ ಹೊತ್ತಿನಲ್ಲಿ ಪ್ರೇಮಿಯೊಂದಿಗೆ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಪೋಷಕರು!

ಜಾತಿ ಪೀಡೆಗಳನ್ನು ಮಟ್ಟ ಹಾಕಲು ನಡೆಯಲಿದೆ ಗುಪ್ತ ಸಮೀಕ್ಷೆ: ಅಸ್ಪೃಶ್ಯತೆ ಆಚರಿಸಿದರೆ ಜೈಲೂಟ ಗ್ಯಾರೆಂಟಿ

ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಮುತ್ತಿಟ್ಟವ ಈಗ ಪೊಲೀಸರ ವಶದಲ್ಲಿ: ಪೊಲೀಸರೆದು ಕಣ್ಣೀರಿಟ್ಟು ಆರೋಪಿ ಹೇಳಿದ್ದೇನು?

ಕೊಪ್ಪಳ ಘಟನೆ: ಬಿಜೆಪಿ, ಹಿಂದೂತ್ವ ಸಂಘಟನೆಗಳಿಗೆ ನಾಚಿಕೆಗೇಡು! | ಬಿಜೆಪಿ ಮನುವಾದಿ ಎಂದ ಕಾಂಗ್ರೆಸ್

ಇತ್ತೀಚಿನ ಸುದ್ದಿ