ಅಂಗನವಾಡಿ ಕಾರ್ಯಕರ್ತೆ ಸಹಿತ ಐವರ ಮಕ್ಕಳ ಮೇಲೆ ಬಿದ್ದ ಗಂಜಿ ನೀರು - Mahanayaka
8:20 PM Wednesday 5 - February 2025

ಅಂಗನವಾಡಿ ಕಾರ್ಯಕರ್ತೆ ಸಹಿತ ಐವರ ಮಕ್ಕಳ ಮೇಲೆ ಬಿದ್ದ ಗಂಜಿ ನೀರು

rayachuru
21/06/2022

ರಾಯಚೂರು : ಅಂಗನವಾಡಿಯಲ್ಲಿ ಗಂಜಿ ಬಸಿಯುತ್ತಿದ್ದ ವೇಳೆ ಗಂಜಿ ಬಿದ್ದು ಐವರು ಮಕ್ಕಳಿಗೆ ಗಂಭೀರ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಅಂಗನವಾಡಿಯು ತುಂಬಾ ಚಿಕ್ಕದಾಗಿರುವ ಕಾರಣ ಅಡುಗೆ ಮಾಡುವ ಸ್ಥಳದ ಪಕ್ಕದಲ್ಲೇ ಮಕ್ಕಳು ಆಡುತ್ತಿದ್ದರು.ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿ ಎಂದಿನಂತೆ ಗಂಜಿ ಬಸಿಯುತ್ತಿದ್ದು, ಇದೇ ವೇಳೆ ಪಕ್ಕದಲ್ಲೇ ಆಟವಾಡುತ್ತಿದ್ದ ಮಕ್ಕಳು ಓಡಿ ಬಂದು ಕಾರ್ಯಕರ್ತೆ ಲಕ್ಷ್ಮಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಲಕ್ಷ್ಮಿ ಕೈನಲ್ಲಿದ್ದ ಅನ್ನದ ಪಾತ್ರೆ ಜಾರಿ ಮಕ್ಕಳ ಮೈಮೇಲೆ ಬಿದ್ದಿದೆ.

ಗಂಜಿಯು ತುಂಬಾ ಬಿಸಿಯಾಗಿದ್ದ ಕಾರಣ ಮಕ್ಕಳಿಗೆ ಗಂಬೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹಾಯಕಿ ಲಕ್ಷ್ಮಿ ಕೈ ಮೇಲೆ ಗಂಜಿ ಬಿದ್ದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಸಿ ಗಂಜಿ ತಗುಲಿದ ಮಕ್ಕಳಾದ ಅರ್ಹಾನ್(3)ಮೊಹಮ್ಮದ್‌ ಜಾಹಿದ್‌(3) ಹಿಬಾ (3)ಶೇಕ್‌ ಅದ್ನಾನ್‌(4), ಬಿಬಿ ಮರಿಯಂ (3)ಎಂದು ಗುರುತಿಸಲಾಗಿದ್ದು ಕಾರ್ಯಕರ್ತೆ ಲಕ್ಷ್ಮಿಗೂ ಸುಟ್ಟ ಗಾಯಗಳಾಗಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಟ ದಿಗಂತ್ ಕುತ್ತಿಗೆಗೆ ಗಂಭೀರ ಏಟು: ಗೋವಾದಿಂದ ಬೆಂಗಳೂರಿಗೆ ಏರ್ ಲಿಫ್ಟ್

ಪ್ರಾಂಶುಪಾಲರನ್ನು ಕರೆದು ಕಪಾಳಕ್ಕೆ ಬಾರಿಸಿದ ಜೆಡಿಎಸ್ ಶಾಸಕ!: ಅನಾಗರಿಕ ವರ್ತನೆ ಕಂಡು ಅಧಿಕಾರಿಗಳು ಶಾಕ್

ಗಂಟಲಲ್ಲಿ ದಾಳಿಂಬೆ ಬೀಜ ಸಿಲುಕಿ 10 ತಿಂಗಳ ಮಗುವಿನ ದಾರುಣ ಸಾವು

ಯೋಗ ವ್ಯಕ್ತಿಗಾಗಿ ಮಾತ್ರವಲ್ಲ, ವಿಶ್ವಶಾಂತಿಗಾಗಿ: ಮೈಸೂರಿನಲ್ಲಿ ಪ್ರಧಾನಿ ಮೋದಿ ಮಾತುಗಳು

ಸ್ಯಾನಿಟೈಸರ್ ಕುಡಿಯುವ ಚಟ: ವ್ಯಾಪಾರಿಗಳಿಗೆ ತಲೆನೋವಾದ ಕೆಎಸ್ ಇಬಿ ನೌಕರ

 

ಇತ್ತೀಚಿನ ಸುದ್ದಿ