ಮಕ್ಕಳಿಗೆ ಸಿಹಿ ಹಂಚುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯನ್ನು ಎಳೆದೊಯ್ದು ಕತ್ತುಕೊಯ್ದ | ಬೆಚ್ಚಿ ಬಿದ್ದ ಜನತೆ - Mahanayaka
12:10 PM Thursday 12 - December 2024

ಮಕ್ಕಳಿಗೆ ಸಿಹಿ ಹಂಚುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯನ್ನು ಎಳೆದೊಯ್ದು ಕತ್ತುಕೊಯ್ದ | ಬೆಚ್ಚಿ ಬಿದ್ದ ಜನತೆ

crime news
14/11/2021

ವರದಿ: ಮಂಜು ಗುರುಗದಹಳ್ಳಿ

ತಿಪಟೂರು: ಮಕ್ಕಳ ದಿನಾಚರಣೆಯ ಸಂಭ್ರಮದಲ್ಲಿ ಮಕ್ಕಳಿಗೆ ಸಿಹಿ ಹಂಚುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯನ್ನು ದುಷ್ಕರ್ಮಿಯೋರ್ವ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿಯ ಹಾಲುಕುರಿಕೆ ಗ್ರಾಮದಲ್ಲಿ ನಡೆದಿದೆ.

ಅಂಗನವಾಡಿ ಕಾರ್ಯಕರ್ತೆ 30 ವರ್ಷ ವಯಸ್ಸಿನ  ಭಾರತಿ ಎಂಬವರು ಹತ್ಯೆಗೀಡಾದವರು ಎಂದು ಗುರುತಿಸಲಾಗಿದೆ. ಇವರ ಸಂಬಂಧಿ ಎನ್ನಲಾಗಿರುವ ದಿವಾಕರ ಎಂಬಾತ ಹತ್ಯೆ ಆರೋಪಿಯಾಗಿದ್ದಾನೆ. ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ 11 ಗಂಟೆಯ ಸುಮಾರಿಗೆ ಭಾರತಿ ಅವರು ಮಕ್ಕಳಿಗೆ  ಸಿಹಿ ಹಂಚುತ್ತಿದ್ದ ವೇಳೆ ಅಂಗನವಾಡಿ ಕೇಂದ್ರಕ್ಕೆ ಬಂದು ಗಲಾಟೆ ನಡೆಸಿದ್ದಾನೆ ಎನ್ನಲಾಗಿದೆ.

ಬಳಿಕ ಭಾರತಿಯವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅಕ್ಕಪಕ್ಕದವರು ತಡೆಯಲು ಮುಂದಾದಾಗ ಚಾಕು ತೋರಿಸಿ ಬೆದರಿಸಿದ್ದಾನೆ. ಇದೇ ವೇಳೆ ಅಂಗನವಾಡಿಯ ಹಿಂಭಾಗಕ್ಕೆ ಭಾರತಿ ಅವರನ್ನು ಎಳೆದೊಯ್ದು ಚಾಕುವಿನಿಂದ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

ಘಟನೆಯನ್ನು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಕಣ್ಣೆದುರೇ ಇಂತಹದ್ದೊಂದು ಘಟನೆ ನಡೆದಿದ್ದು, ಸ್ಥಳೀಯರನ್ನು ಕ್ಯಾರೇ ಮಾಡದೇ ಆರೋಪಿಯು ಈ ದುಷ್ಕೃತ್ಯವನ್ನು ನಡೆಸಿದ್ದಾನೆ. ಘಟನೆ ಸಂಬಂಧ ಇನ್ನಷ್ಟು ಮಾಹಿತಿಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ದೆಹಲಿಯಲ್ಲಿ ಒಂದು ದಿನ ಉಸಿರಾಡೋದು 20 ಸಿಗರೇಟ್ ಸೇದಿದ್ದಕ್ಕೆ ಸಮಾನ! | ದೆಹಲಿಯಲ್ಲೀಗ ಆಕ್ಸಿಜನ್ ಇಲ್ಲದೇ ಪರದಾಡುವ ಸ್ಥಿತಿ!

ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರ ದಾರುಣ ಸಾವು!

ರಚಿತಾ ರಾಮ್  “ಫಸ್ಟ್ ನೈಟ್” ಹೇಳಿಕೆಗೆ ಆಕ್ಷೇಪ: ಕ್ಷಮೆಯಾಚನೆಗೆ ಒತ್ತಾಯ

ಪುನೀತ್ ಗೆ ಅವಮಾನ ಆರೋಪ: “ಅದು ಶಾಂಪೇನ್ ಬಾಟಲಿ ಆಗಿರಲಿಲ್ಲ” | ರಕ್ಷಿತಾ ಪ್ರೇಮ್ ಸ್ಪಷ್ಟನೆ

4 ಕೋಟಿಯ ಚಿನ್ನಾಭರಣ ಕಳವು: ಮಗಳ ವಿರುದ್ಧವೇ ದೂರು ನೀಡಿದ ತಾಯಿ!

ಗೋವು, ಸೆಗಣಿ, ಗೋಮೂತ್ರ ಆರ್ಥಿಕತೆಯನ್ನು ಬಲಪಡಿಸುತ್ತದೆ: ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆ

ಇತ್ತೀಚಿನ ಸುದ್ದಿ