ಧಾರವಾಡ- ಶಿವಮೊಗ್ಗ ಜಿಲ್ಲೆಯ ಅಂಗನವಾಡಿಗಳಲ್ಲಿ 700 ಕ್ಕೂ ಹೆಚ್ಚು ಹುದ್ದೆಗಳಿವೆ: ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ - Mahanayaka
12:48 AM Monday 16 - September 2024

ಧಾರವಾಡ– ಶಿವಮೊಗ್ಗ ಜಿಲ್ಲೆಯ ಅಂಗನವಾಡಿಗಳಲ್ಲಿ 700 ಕ್ಕೂ ಹೆಚ್ಚು ಹುದ್ದೆಗಳಿವೆ: ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ

anganavadi
07/08/2024

ದ್ವಿತೀಯ ಪಿಯುಸಿ ಪಾಸಾದವರಿಗೆ ಹಾಗೂ 10ನೇ ತರಗತಿ ಪಾಸಾದವರಿಗೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕ್ಕೆ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದ್ದು, ಎರಡು ಜಿಲ್ಲೆಗಳಲ್ಲಿ ಒಟ್ಟು 700ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ.

Anganawadi Recruitment 2024 : ಧಾರವಾಡ ಮತ್ತು ಶಿವಮೊಗ್ಗ ಜಿಲ್ಲೆ ಅಡಿಯಲ್ಲಿ ಬರುವ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವಂತಹ ಅಂಗನವಾಡಿ ಸಹಾಯಕರು ಮತ್ತು ಕಾರ್ಯಕರ್ತೆಯರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಯಾವ ಜಿಲ್ಲೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ? ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅರ್ಹತೆಗಳು ಹಾಗೂ ಅರ್ಜಿ ಸಲ್ಲಿಸಲು ಬೇಕಾದ ಡೈರೆಕ್ಟ ಲಿಂಕ್ ಅನ್ನು ಇಲ್ಲಿ ನೀಡಲಾಗಿದ್ದು, ಲೇಖನವನ್ನು ಕೊನೆಯವರೆಗೂ ಹೋದೆ ಅರ್ಜಿ ಸಲ್ಲಿಸಿ.

 ಧಾರವಾಡ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ :


Provided by

* ಧಾರವಾಡ ಜಿಲ್ಲೆಯಲ್ಲಿ : 199 ಹುದ್ದೆಗಳು

* ಶಿವಮೊಗ್ಗ ಜಿಲ್ಲೆಯಲ್ಲಿ : 575 ಹುದ್ದೆಗಳು

ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು :

ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂಥವರು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 12ನೇ ತರಗತಿ ಪಾಸ್ ಆಗಿರಬೇಕು ಹಾಗೂ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 10ನೇ ತರಗತಿ ವ್ಯಾಸಂಗ ಪೂರ್ಣಗೊಳಿಸಿರಬೇಕು.

ವಯೋಮಿತಿ ಅರ್ಹತೆಗಳನ್ನು ನೋಡುವುದಾದರೆ, ಅರ್ಜಿ ಸಲ್ಲಿಸುವಂಥವರು 18 ರಿಂದ 35 ವರ್ಷದೊಳಗಿನವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಜಿಲ್ಲಾವಾರು ಕೊನೆಯ ದಿನಾಂಕದ ವಿವರ:

*  ಧಾರವಾಡ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 02ನೇ ಸೆಪ್ಟೆಂಬರ್ 2024.

*  ಶಿವಮೊಗ್ಗ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 29ನೇ ಆಗಸ್ಟ್ 2024.

 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಹೇಗೆ ಸಲ್ಲಿಸಬೇಕು?

ಶಿವಮೊಗ್ಗ ಹಾಗೂ ಧಾರವಾಡ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ಜಾಲತಾಣಕ್ಕೆ ಭೇಟಿ ನೀಡಿ ನೀವು ಯಾವ ಜಿಲ್ಲೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿರುವಿರೋ ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ನಿಗದಿಪಡಿಸಿದ ಕೊನೆಯ ದಿನಾಂಕದ ಮುಂಚಿತವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವ ಲಿಂಕ್: https://karnemakaone.kar.nic.in/abcd/ApplicationForm_JA_org.aspx


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ