ಅಂಗವಿಕಲರ ಬಗ್ಗೆ ವಿವಾದಿತ ಹೇಳಿಕೆ: ಮುಖ್ಯಮಂತ್ರಿ ಚಂದ್ರು ವಿಷಾದ - Mahanayaka
3:48 AM Wednesday 5 - February 2025

ಅಂಗವಿಕಲರ ಬಗ್ಗೆ ವಿವಾದಿತ ಹೇಳಿಕೆ: ಮುಖ್ಯಮಂತ್ರಿ ಚಂದ್ರು ವಿಷಾದ

mukhyamanthri chandru
10/02/2023

ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಯ ಆಯ್ಕೆಗೆ ಸಂಬಂಧಿಸಿ ಮಾತನಾಡುವಾಗ ಅಂಗವಿಕಲರ ವಿಷಯ ಪ್ರಸ್ತಾಪಿಸಿದ್ದಕ್ಕೆ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಪ್ರಚಾರ ಹಾಗೂ ಜನಸಂಪರ್ಕ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಚಂದ್ರು, “ಫೆಬ್ರವರಿ 1ರಂದು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಉತ್ಸವದಲ್ಲಿ ನಾನು ಮಾಡಿದ ಭಾಷಣ ಉದ್ದೇಶವು ಜನರು ಉತ್ತಮ ಅಭ್ಯರ್ಥಿಗೆ ಮತ ಹಾಕಬೇಕು ಹಾಗೂ ಈ ಮೂಲಕ ಪ್ರಜಾಪ್ರಭುತ್ವದ ಆಶಯ ಸಾಕಾರಗೊಳ್ಳಬೇಕು ಎಂಬುದಾಗಿತ್ತುಎಂದು ಸ್ಪಷ್ಟಪಡಿಸಿದ್ದಾರೆ.

ಮೂರು ದಶಕಗಳ ಹಿಂದೆ ಶೂಟಿಂಗ್‌ ಸಮಯದಲ್ಲಿ, ನನ್ನ ಬಲ ರೆಟಿನಗೆ ಬದಲಾಯಿಸಲಾಗದ ಹಾನಿಯನ್ನು ಅನುಭವಿಸಿದೆ. ಅದು ನನ್ನನ್ನು ಬಲಗಣ್ಣಿನಲ್ಲಿ ಕುರುಡನನ್ನಾಗಿ ಮಾಡಿದೆ ಎಂದು ಅನೇಕರಿಗೆ ತಿಳಿದಿಲ್ಲ. ಅಂಗವಿಕಲರ ಕಾಯ್ದೆಯಡಿ ನಾನೇ ವಿಕಲಚೇತನ. ಈ ವಿಷಯದಲ್ಲಿ ನಾನು ಸಮುದಾಯವನ್ನು ಅವಹೇಳನ ಮಾಡುವ ಕಾಮೆಂಟ್‌ ಗಳನ್ನು ಮಾಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ, ಯಾರೊಬ್ಬರ ಭಾವನೆಗಳನ್ನು ನೋಯಿಸಿದ್ದರೆ, ನಾನು ವಿಷಾದಿಸುತ್ತೇನೆ” ಎಂದು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ