ಜ.5: ಅನಿಲ್ ಗುನ್ನಾಪುರವರ ‘ಸರ್ವೇ ನಂಬರ್—97’ ಕಥಾಸಂಕಲನ ಬಿಡುಗಡೆ ಕಾರ್ಯಕ್ರಮ - Mahanayaka
10:45 AM Wednesday 5 - February 2025

ಜ.5: ಅನಿಲ್ ಗುನ್ನಾಪುರವರ ‘ಸರ್ವೇ ನಂಬರ್—97’ ಕಥಾಸಂಕಲನ ಬಿಡುಗಡೆ ಕಾರ್ಯಕ್ರಮ

Survey number 97
04/01/2025

ಬೆಂಗಳೂರು: ಅನಿಲ್ ಗುನ್ನಾಪೂರ ಅವರು ಬರೆದ ‘ಸರ್ವೇ ನಂಬರ್-97’ ಎಂಬ ಕಥಾಸಂಕಲನವನ್ನು ಹೊಗಿರಣ ಪ್ರಕಾಶನ, ಬುಕ್ ಬ್ರಹ್ಮ ಹಾಗೂ ನ್ಯಾಯ ಸ್ಪಂದನ ಬೆಂಗಳೂರು, ಓದು ಗೆಳೆಯರ ಬಳಗ, ಬಾಗಲಕೋಟೆ ಇವರ ಸಹಯೋಗದಲ್ಲಿ ಇದೇ ಭಾನುವಾರ(ಜ.5) ಬೆಳಗ್ಗೆ 10:30 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ (ಶ್ರೀ ಕೃಷ್ಣರಾಜ ಪರಿಷತ್ತು ಮಂದಿರ, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ ಎoದು ಹೈಕೋರ್ಟ್ ವಕೀಲರಾದ ಸುನಿಲಕುಮಾರ್ ಗುನ್ನಾಪೂರರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನಿಲ್ ಗುನ್ನಾಪೂರ ಅವರ ‘ಸರ್ವೇ ನಂಬರ್-97’ ಎಂಬ ಕಥಾಸಂಕಲನವನ್ನು ಹಿರಿಯ ಕವಿ ಹಾಗೂ ಚಿಂತಕರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಇದರ ಅಧ್ಯಕ್ಷತೆಯನ್ನು ಲೇಖಕ ಮತ್ತು ಹಿರಿಯ ಪತ್ರಕರ್ತರಾದ ರಘುನಾಥ ಚ.ಹ. ಅವರು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ವಲಯ ಆಯುಕ್ತರು ಮತ್ತು ಯಲಹಂಕ ವಲಯದ ಕರೀಗೌಡ (ಐಎಎಸ್) ಹಾಗೂ ಕವಯಿತ್ರಿ, ಅನುವಾದಕಿ ಮತ್ತು ಕತೆಗಾರ್ತಿಯಾದ ಜ.ನಾ.ವೇಜಶ್ರೀ, ನಡೆದಾಡುವ ದೇವರ ಪ್ರತಿಷ್ಠಾನ, ಕನ್ನಡ ಮನಸುಗಳು, ಚಾರಣ ಬಳಗ, ಎಂ.ಇ ಅಸೋಸಿಯೇಷನ್ ನ ಗಣ್ಯರು, ಮತಿತರು ಭಾಗವಹಿಸಲಿದ್ದಾರೆ ಹಾಗೂ ಕಾರ್ಯಕ್ರಮದ ನಿರ್ವಹಣೆಯನ್ನು ಶೃತಿ.ಬಿ.ಆರ್, ಸ್ವಾಗತವನ್ನು ಸುನಿಲಕುಮಾರ್ ಗುನ್ನಾಪೂರ ನೆರವೇರಿಸಲಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ