ಗ್ರಾಮ ಪಂಚಾಯತ್ ಚುನಾವಣೆ ಸ್ಪರ್ಧಿ, ಭಿಕ್ಷುಕ ಅಂಕನಾಯ್ಕ ಗೆದ್ದರಾ, ಸೋತರಾ? - Mahanayaka
10:33 AM Wednesday 15 - January 2025

ಗ್ರಾಮ ಪಂಚಾಯತ್ ಚುನಾವಣೆ ಸ್ಪರ್ಧಿ, ಭಿಕ್ಷುಕ ಅಂಕನಾಯ್ಕ ಗೆದ್ದರಾ, ಸೋತರಾ?

31/12/2020

ಮೈಸೂರು: ನಂಜನಗೂಡು ತಾಲೂಕಿನ ಹುಳಿಮಾವು ಗ್ರಾಮ ಪಂಚಾಯತ್ ನಿಂದ ಸ್ಪರ್ಧಿಸಿದ್ದ, ಭಿಕ್ಷು ಅಂಕನಾಯ್ಕ ಬೊಕ್ಕಹಳ್ಳಿ ಅವರು 311 ಮತಗಳನ್ನು ಪಡೆಯುವ ಮೂಲಕ ಸೋಲು ಅನುಭವಿಸಿದ್ದಾರೆ.

ಗ್ರಾಮದ ಯುವಕರು ಭಿಕ್ಷೆ ಬೇಡುತ್ತಿದ್ದ, ವಿಕಲಚೇತನರೂ ಆಗಿರುವ ಅಂಕನಾಯ್ಕ ಅವರನ್ನು ಚುನಾವಣ ಕಣಕ್ಕಿಳಿಸಿದ್ದರು.  ಅಂಕನಾಯ್ಕ ಅವರು ಸೋಲು ಅನುಭವಿಸಿದ್ದರೂ, ತಮ್ಮ ಪ್ರತಿಸ್ಪರ್ಧಿ ನಾಗೇಂದ್ರ ಅವರನ್ನು ಸೋಲಿಸಿದ್ದಾರೆ.  ನಾಗೇಂದ್ರ ಅವರು 430 ಮತಗಳನ್ನು ಪಡೆದುಕೊಂಡಿದ್ದಾರೆ. ನಾಗೇಂದ್ರ ಅವರಿಗೆ ಸಿಗುತ್ತಿದ್ದ 311 ಮತಗಳು ಅಂಕನಾಯ್ಕ ಅವರ ಪಾಲಾಗಿದೆ. ಹೀಗಾಗಿ ಈ ಪಂಚಾಯತ್ ನಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿಯಲ್ಲಿ ಕಣಕ್ಕಿಳಿಸಿದ್ದ ಶಿವರಾಮನಾಯ್ಕ 482 ಮತಗಳನ್ನು ಪಡೆದು ಗೆಲುವು ಸಾಧಿಸಿದರು.


ADS

ಅವಿವಾಹಿತರಾಗಿರುವ ಅಂಕನಾಯ್ಕರು, ಗ್ರಾಮದಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು. ಇಲ್ಲಿನ ಯುವಕರು ಅಂಕನಾಯ್ಕರನ್ನು ಚುನಾವಣೆಗೆ ನಿಲ್ಲಿಸಿದ್ದು, ಕಾರಿನಲ್ಲಿ ಕರೆತಂದು ನಾಮಪತ್ರ ಸಲ್ಲಿಸಿದ್ದರು. ಈ ಘಟನೆ ರಾಜ್ಯಾದ್ಯಂತ ಅಚ್ಚರಿಯ ಸುದ್ದಿಯಾಗಿತ್ತು.

ಇತ್ತೀಚಿನ ಸುದ್ದಿ