ಅಣ್ಣ ಹೇಳಿದಂತೆ ಅತ್ತಿಗೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೈದುನ - Mahanayaka
11:54 AM Thursday 12 - December 2024

ಅಣ್ಣ ಹೇಳಿದಂತೆ ಅತ್ತಿಗೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೈದುನ

crime news
07/02/2022

ಬೆಂಗಳೂರು: ಪತಿಯೇ ತನ್ನ ಪತ್ನಿಯ ಮೇಲೆ ಅತ್ಯಾಚಾರ ನಡೆಸಲು ತಮ್ಮಂದಿರಿಗೆ ಸಾಥ್ ಕೊಟ್ಟ ಪೈಶಾಚಿಕ ಘಟನೆಗೆ ರಾಜಧಾನಿ ಬೆಂಗಳೂರು ನಗರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಬೆಂಗಳೂರಿನ ಗೋವಿಂದಪುರದಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಸಂತ್ರಸ್ತೆ ತನಗಾದ ಅನ್ಯಾಯವನ್ನು ದೂರಿನಲ್ಲಿ ವಿವರಿಸಿದ್ದಾರೆ.

ಸಂತ್ರಸ್ತೆ 2007ರಲ್ಲಿ ಅಬ್ದುಲ್ ನಬಿ ಎಂಬಾತನ ಜೊತೆ ವಿವಾಹವಾಗಿದ್ದರು. ಡೆಲಿವರಿಗೆಂದು ತವರು ಮನೆಗೆ ಹೋಗಿ ಬಂದ ಬಳಿಕ ಅಬ್ದುಲ್ ನಬಿ ತನ್ನ ಹುಚ್ಚಾಟ ಆರಂಭಿಸಿದ್ದಾನೆ. ಮನೆಗೆ ಬರಬೇಕಾದರೆ ಐದು ಲಕ್ಷ ರೂ. ತರುವಂತೆ ಸೂಚನೆ ನೀಡಿದ್ದಾನೆ. ಹಣ ತರಲು ನಿರಾಕರಿಸಿದ್ದಕ್ಕೆ ಸಂತ್ರಸ್ತೆಯನ್ನು ಮನೆಯಿಂದ ಆಚೆ ಹಾಕಿದ್ದಾನೆ. ಸಂತ್ರಸ್ತೆ ಕಳೆದ ಎರಡು ವರ್ಷಗಳಿಂದ ತವರು ಮನೆಯಲ್ಲೇ ಇದ್ದು, ಕಳೆದೆರೆಡು ತಿಂಗಳ ಹಿಂದೆ ಸಂತ್ರಸ್ತೆಗೆ ವಿಚ್ಛೇದನ ನೀಡದೇ ಅಬ್ದುಲ್ ನಬಿ ಬೇರೆ ಮದುವೆಯಾಗಿದ್ದಾನೆ.

ಈ ವಿಚಾರ ತಿಳಿದು ಪ್ರಶ್ನಿಸಲು ಪತಿಯ ಮನೆಗೆ ತೆರಳಿದ್ದ ಸಂತ್ರಸ್ತೆ ಮೇಲೆ ಪತಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಪತ್ನಿಯ ಮೇಲೆ ಅತ್ಯಾಚಾರ ನಡೆಸುವಂತೆ ತನ್ನ ತಮ್ಮಂದಿರಿಗೆ ಸೂಚಿಸಿದ್ದಾನೆ ಎನ್ನಲಾಗಿದೆ.

ಅಣ್ಣನ ಮಾತಿಗೆ ಒಪ್ಪಿದ ತಮ್ಮಂದಿರು, ಅತ್ತಿಗೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಘಟನೆ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳಿಂದ ಮೆರವಣಿಗೆ!: ಬೀದಿ ರಾಜಕೀಯ ಕ್ಯಾಂಪಸ್ ನೊಳಗೆ ನುಸುಳಿದ್ದು ಹೇಗೆ?

ಪಿಯುಸಿ ವಿದ್ಯಾರ್ಥಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣು

ಪಂಜಾಬ್ ಸಿಎಂ ಅಭ್ಯರ್ಥಿಯನ್ನು ಘೋಷಿಸಿದ ಕಾಂಗ್ರೆಸ್

ಹಿಜಾಬ್ ವಿವಾದ: ಜನರಿಗೆ ತಮ್ಮಿಷ್ಟದ ಉಡುಗೆ ತೊಡುವ ಸ್ವಾತಂತ್ರ್ಯ ಡಾ.ಅಂಬೇಡ್ಕರ್ ನೀಡಿದ್ದಾರೆ | ಶಾಸಕಿ ಕನೀಝ್ ಫಾತಿಮಾ

ಒಂದೇ ಕುಟುಂಬದ ಐವರ ಬರ್ಬರ ಹತ್ಯೆ: ಮಕ್ಕಳು ಎಂದೂ ನೋಡದ ಕೊಚ್ಚಿ ಹಾಕಿದರು!

ಇತ್ತೀಚಿನ ಸುದ್ದಿ