ಚಿಕ್ಕಮಗಳೂರು ಉತ್ಸವಕ್ಕೆ ಆಗಮಿಸಿದ ಅಣ್ಣಾಮಲೈ | ಎತ್ತಿನ ಗಾಡಿ ಓಡಿಸಿದ ಸಿ.ಟಿ.ರವಿ
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಭಾಗಿಯಾಗಿದ್ದಾರೆ.
ಉತ್ಸವಕ್ಕೆ ಆಗಮಿಸಿದ ಅಣ್ಣಾಮಲೈ ಅವರನ್ನು ಶಾಸಕ ಸಿ.ಟಿ. ರವಿ ಆತ್ಮೀಯವಾಗಿ ಬರಮಾಡಿಕೊಂಡರು. ಕಾರ್ಯಕ್ರಮದ ಬಳಿಕ ಅಣ್ಣಾಮಲೈ ಅವರು ಕೃಷಿ ಮೇಳದಲ್ಲಿ ಕೂಡ ಭಾಗಿಯಾಗಲಿದ್ದಾರೆ. ಮಧ್ಯಾಹ್ನದ ಬಳಿಕ ತಮಿಳುನಾಡಿಗೆ ಅವರು ವಾಪಸ್ಸಾಗಲಿದ್ದಾರೆ.
ಎತ್ತಿನಗಾಡಿ ಓಡಿಸಿದ ಸಿ.ಟಿ.ರವಿ:
ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ ಎತ್ತಿನಗಾಡಿ ಮೆರವಣಿಗೆಯಲ್ಲಿ ಸಿ.ಟಿ.ರವಿ ಗಾಡಿ ಓಡಿಸಿ ಗಮನ ಸೆಳೆದರು. ಚಿಕ್ಕಮಗಳೂರು ನಗರದ ಎಂ.ಜಿ.ರಸ್ತೆಯಲ್ಲಿ ಸಿ.ಟಿ.ರವಿ ಎತ್ತಿನ ಗಾಡಿ ಓಡಿಸಿದರು. ಎಂ.ಜಿ.ರಸ್ತೆಯಿಂದ ಡಿಸಿ ಕಚೇರಿವರೆಗೂ ಎತ್ತಿನ ಗಾಡಿ ಮೆರವಣಿಗೆ ನಡೆಯಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw