ಮೇಕೆದಾಟು: “ರಾಜಕೀಯಕ್ಕಾಗಿ ಅಣ್ಣಾಮಲೈ ಉಪವಾಸ ಮಾಡುತ್ತಿದ್ದಾರೆ” | ಪಕ್ಷ ಒಂದು, ಅಭಿಪ್ರಾಯ ಎರಡಾಗಿದ್ದು ಹೇಗೆ?
ಮೈಸೂರು: ಮೇಕೆದಾಟು ಅಣೆಕಟ್ಟು ವಿರೋಧಿಸಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ಅಲ್ಲಿನ ರಾಜಕೀಯಕ್ಕಾಗಿ ಅಣ್ಣಾಮಲೈ ಉಪವಾಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಯೋಜನೆಗಾಗಿ ಪ್ರಧಾನಿ ಮೋದಿ ಸರ್ಕಾರ ಡಿಪಿಆರ್ ಸಿದ್ಧಪಡಿಸಿ ವರದಿ ಸಲ್ಲಿಕೆ ಮಾಡಲು ಹೇಳಿದೆ. ಆದರೆ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಅಲ್ಲಿನ ರಾಜಕೀಯಕ್ಕಾಗಿ ಉಪವಾಸ ಮಾಡುತ್ತಿದ್ದಾರೆ. ಅದನ್ನು ಬೇಡ ಎಂದು ನಾವು ಹೇಳಲು ಆಗಲ್ಲ. ಈ ಬಗ್ಗೆ ನಮ್ಮಲ್ಲಿ ಚರ್ಚೆ ನಡೆಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಬಿಜೆಪಿಯೊಳಗೆ ಹೈಡ್ರಾಮಾ ನಡೆಯುತ್ತಿದೆ. ತಮಿಳುನಾಡು ಬಿಜೆಪಿ ಮೇಕೆದಾಟು ಯೋಜನೆಯನ್ನು ವಿರೋಧಿಸಿದರೆ, ರಾಜ್ಯ ಬಿಜೆಪಿ ಮೇಕೆದಾಟು ಯೋಜನೆ ಬೇಕು ಎನ್ನುತ್ತಿದೆ. ಒಂದೇ ಪಕ್ಷದ ಎರಡು ರಾಜ್ಯ ಘಟಕಗಳು ಹೇಗೆ ಎರಡು ವಿಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದೆ ಎನ್ನುವ ಅನುಮಾನಗಳು ಸೃಷ್ಟಿಯಾಗಿವೆ.
ಈ ನಡುವೆಯೇ, ತಮಿಳುನಾಡು ಬಿಜೆಪಿ ರಾಜಕೀಯ ಲಾಭ ಪಡೆಯುವ ವಿಚಾರವಾಗಿ ಮೇಕೆದಾಟು ಯೋಜನೆಯ ವಿರುದ್ಧ ಪ್ರತಿಭಟನೆ ಆರಂಭಿಸಿದೆ ಎಂದು ರಾಜ್ಯ ಬಿಜೆಪಿ ಮುಖಂಡರೇ ಹೇಳುತ್ತಿದ್ದಾರೆ. ಆ.5ರಂದು ಅಣ್ಣಾಮಲೈ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ಉನ್ನಾವೋ ಸಂತ್ರಸ್ತೆಯ ಅಪಘಾತ ಪ್ರಕರಣ: ದೂರುದಾರರ ಆಕ್ಷೇಪಣೆ ರೋಮಾಂಚಕ ಕತೆಯಂತಿವೆ | ದೆಹಲಿ ನ್ಯಾಯಾಲಯ
ಸರ್ಕಾರದ ವಿರುದ್ಧ ಸಿಡಿದೆದ್ದ ಖಾಸಗಿ ಶಾಲೆಗಳು: ಅನುಮತಿ ಇಲ್ಲದೆಯೇ ಶಾಲೆ ಆರಂಭಕ್ಕೆ ಮುಂದಾಯ್ತೇ ರುಪ್ಸಾ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕಠಿಣ ಕ್ರಮಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಸೂಚನೆ
ರಸ್ತೆಯಲ್ಲಿ ಅಡ್ಡನಿಂತು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ವ್ಯಕ್ತಿಗೆ ಧರ್ಮದೇಟು!
ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೇಲೆ ಕಾರಿನಲ್ಲೇ ಅತ್ಯಾಚಾರ | ಬಾಡಿಗೆ ಮನೆ ಮಾಲಿಕನಿಂದ ಕೃತ್ಯ