ಕಾಡಾನೆ ದಾಳಿಗೆ ಮತ್ತೊಂದು ಬಲಿ: 2 ತಿಂಗಳ ಅವಧಿಯಲ್ಲಿ 3ನೇ ಬಲಿ

chikkamagaluru
22/11/2023

ಕೊಟ್ಟಿಗೆಹಾರ:  ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೋರ್ವ ಯುವಕ ಬಲಿಯಾಗಿದ್ದು, ಕಳೆದ ಎರಡು ತಿಂಗಳ ಅವಧಿಯಲ್ಲಿ ಇದು ಮೂರನೇ ಬಲಿಯಾಗಿದೆ.

ಕಾರ್ತಿಕ್ ಗೌಡ (26) ಮೃತ ದುರ್ದೈವಿಯಾಗಿದ್ದಾನೆ. ಮೃತ ಕಾರ್ತಿಕ್‌ ಅವರು ಆನೆ ನಿಗ್ರಹ ಪಡೆಯ ಸದಸ್ಯ ಆಗಿದ್ದರು. ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ 20 ದಿನಗಳಲ್ಲಿ ಕಾಡಾನೆ ದಾಳಿಗೆ 2ನೇ ಬಲಿಯಾಗಿದೆ.

ಮೃತ ಕಾರ್ತಿಕ್ ಮೂಡಿಗೆರೆ ತಾಲೂಕಿನ ಗೌಡಹಳ್ಳಿ ನಿವಾಸಿಯಾಗಿದ್ದಾರೆ. ಸರ್ಕಾರ ರಚಿಸಿದ್ದ. ಆನೆ ನಿಗ್ರಹ ಪಡೆಯಲ್ಲಿ ಕೆಲಸ ಕೆಲಸ ಮಾಡುತ್ತಿದ್ದರು. ಬೈರಾಪುರದಲ್ಲಿ ಆನೆ ಓಡಿಸುವಾಗ ತಿರುಗಿಬಿದ್ದ ಆನೆ ದಾಳಿ ನಡೆಸಿದ್ದು, ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಅವರು ಸಾವನ್ನಪ್ಪಿದ್ದಾರೆ.

ಕಳೆದ 20 ದಿನಗಳ ಹಿಂದೆ ಆಲ್ದೂರಿನಲ್ಲಿ ಅಮಾಯಕ ಮಹಿಳೆ ವೀಣಾ ಅವರು ಕಾಡಾನೆ ತುಳಿತಕ್ಕೆ ಬಲಿಯಾಗಿದ್ದರು. ಇಂದು ಮೂಡಿಗೆರೆಯ ಬೈರಾಪುರದಲ್ಲಿ ಕಾರ್ತಿಕ್ ಸಾವನ್ನಪ್ಪಿದ್ದಾರೆ.  ಒಂದೂವರೆ ತಿಂಗಳ ಹಿಂದೆ ಆಲ್ದೂರು ಸಮೀಪ ಚಿನ್ನಿ ಎಂಬುವರು  ಕಾಡಾನೆಗೆ ಬಲಿಯಾಗಿದ್ದಾರೆ.

ಇತ್ತೀಚಿನ ಸುದ್ದಿ

Exit mobile version