ಅತ್ಯಾಚಾರಿಗಳ ಸ್ವರ್ಗ ಉತ್ತರ ಪ್ರದೇಶದಲ್ಲಿ ಮತ್ತೊಂದು ಗ್ಯಾಂಗ್ ರೇಪ್, ಹತ್ಯೆ
ಬಾರಾಬಂಕಿ: ಉತ್ತರಪ್ರದೇಶ ಅತ್ಯಾಚಾರಿಗಳಿಗೆ ಸ್ವರ್ಗವಾಗಿದೆ. ಸಾಲು ಸಾಲು ಅತ್ಯಾಚಾರ ಪ್ರಕರಣಗಳು ನಡೆದ ಬಳಿಕ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬಾಲಕಿಯನ್ನು ಹತ್ಯೆ ಮಾಡಲಾಗಿದೆ.
ರಾಜಧಾನಿ ಲಕ್ನೋದಿಂದ 30 ಕಿ.ಮೀ. ದೂರದಲ್ಲಿರುವ ಬಾರಾಬಂಕಿಯಲ್ಲಿ ಬಾಲಕಿಯ ಸ್ನೇಹಿತ ಹಾಗೂ ಇನ್ನೋರ್ವ ಬಾಲಕಿಯನ್ನು ಅತ್ಯಾಚಾರ ನಡೆಸಿ ಹತ್ಯೆ ಗೈದಿದ್ದಾರೆ. ಹತ್ಯೆಯ ಬಳಿಕ ನಾಲೆಯೊಂದಕ್ಕೆ ಮೃತದೇಹವನ್ನು ಎಸೆದು ಹೋಗಿದ್ದಾರೆ.
ಈ ಸಂಬಂಧ ಬಾಲಕಿಯ ಸ್ನೇಹಿತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬಾಲಕಿ ನಾಪತ್ತೆಯಾಗಿರುವುದಾಗಿ ಪೋಷಕರು ಕೆಲ ದಿನಗಳ ಹಿಂದೆ ದೂರು ನೀಡಿದ್ದರು.
ಇನ್ನೂ ಉತ್ತರಪ್ರದೇಶವು ಅತ್ಯಾಚಾರಿಗಳ ಸ್ವರ್ಗವಾಗುತ್ತಿದೆ. : ಉತ್ತರ ಪ್ರದೇಶದ ಹರಪುರ್‍ನಲ್ಲಿ 14 ವರ್ಷದ ಬಾಲಕಿ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆಯೂ ನಡೆದಿದೆ. ಈ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಹತ್ರಾಸ್ ಮತ್ತು ಬಲರಾಂಪುರ್ ಪ್ರದೇಶಗಳಲ್ಲಿ ದಲಿತ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ನಡೆಸಿರುವ ಘಟನೆಗಳ ಬಳಿಕ ಉತ್ತರಪ್ರದೇಶದಲ್ಲಿ ಸಾಲು ಸಾಲು ಅತ್ಯಾಚಾರ ಪ್ರಕರಣಗಳು ಪತ್ತೆಯಾಗಿವೆ. ಉತ್ತರ ಪ್ರದೇಶ ಸರ್ಕಾರವು ಅತ್ಯಾಚಾರಿಗಳಿಗೆ ಅಭಯ ನೀಡುತ್ತಿದೆ. ಹೀಗಾಗಿ ಅಲ್ಲಿ ಅತ್ಯಾಚಾರಿಗಳಿಗೆ ಯಾವುದೇ ಭಯವಿಲ್ಲ ಎಂದು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿವೆ.