ಕ್ಷುಲ್ಲಕ ಕಾರಣಕ್ಕೆ ಲಾರಿ ಚಾಲಕನನ್ನು ಇರಿದು ಕೊಂದ ಮತ್ತೋರ್ವ ಲಾರಿ ಚಾಲಕ!

ಕಾರ್ಕಳ: ಕ್ಷುಲ್ಲಕ ಕಾರಣಕ್ಕಾಗಿ ತಮಿಳುನಾಡಿನ ಲಾರಿ ಚಾಲಕ ಇನ್ನೋರ್ವ ಲಾರಿ ಚಾಲಕನನ್ನು ಇರಿದು ಕೊಂದಿರುವ ಘಟನೆ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿ ನಡೆದಿದೆ.
ಮೃತರನ್ನು ಲಾರಿಯ ಚಾಲಕ ತಮಿಳುನಾಡಿನ ಮಣಿ (36) ಎಂದು ಗುರುತಿಸಲಾಗಿದೆ. ಇನ್ನೋರ್ವ ಲಾರಿ ಚಾಲಕ ವೀರಬಾಹು ಕೊಲೆ ಆರೋಪಿ.
ಮುಡ್ರಾಲು ಎಂಬಲ್ಲಿರುವ ಶ್ರೀದೇವಿ ಕ್ಯಾಶ್ಯೂ ಫ್ಯಾಕ್ಟರಿಗೆ ತಮಿಳುನಾಡಿನಿಂದ ಜ.30 ರಂದು ಸಂಜೆ ಗೇರುಬೀಜದ ತುಂಬಿದ್ದ ಲಾರಿಗಳು ಬಂದಿದ್ದು ಈ ಲಾರಿಗಳ ಚಾಲಕ ಹಾಗೂ ಬದಲಿ ಚಾಲಕರುಗಳು ಕೂಡಾ ಅಲ್ಲಿಯೇ ಉಳಿದುಕೊಂಡಿದ್ದರು.
ರಾತ್ರಿ 8:30ರ ಸುಮಾರಿಗೆ ವೀರಬಾಹು ಹಾಗೂ ಮಣಿ ಗಲಾಟೆ ಮಾಡಿಕೊಂಡಿದ್ದು ಈ ವೇಳೆ ವೀರಬಾಹು, ಮಣಿ ಯ ಕುತ್ತಿಗೆಗೆ ಶಾಲ್ ನಿಂದ ಬಿಗಿದು ಆಯುಧದಿಂದ ಇರಿದು ಗಾಯಗೊಳಿಸಿ ಕೊಲೆ ಮಾಡಿದ್ದಾನೆ ಎಂದು ದೂರಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw