‘ಸಾಕಪ್ಪಾ ಸಾಕು ಕಿವಿಯ ಮೇಲೆ ಹೂವ’: ಬಿಜೆಪಿಯ ಪೋಸ್ಟ್ ಮೇಲೆ ಇನ್ನೊಂದು ಪೋಸ್ಟರ್! - Mahanayaka

‘ಸಾಕಪ್ಪಾ ಸಾಕು ಕಿವಿಯ ಮೇಲೆ ಹೂವ’: ಬಿಜೆಪಿಯ ಪೋಸ್ಟ್ ಮೇಲೆ ಇನ್ನೊಂದು ಪೋಸ್ಟರ್!

congress vs bjp
19/02/2023

ಮಂಗಳೂರಲ್ಲಿ ಕಾಂಗ್ರೆಸ್ಸಿಗರು ‘ಸಾಕಪ್ಪ ಸಾಕು’ ಅಂತಿದ್ದಾರೆಯೇ..?  ಹೀಗೊಂದು ಪ್ರಶ್ನೆ ಮೂಡಿದ್ದು ಇದು ಬಿಜೆಪಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ.


Provided by

ವಿಷಯ ಏನಪ್ಪ ಅಂದ್ರೆ, ಮಂಗಳೂರು ನಗರದಲ್ಲೂ ‘ಬಿಜೆಪಿಯೇ ಭರವಸೆ’ ಎಂಬ ಪೋಸ್ಟರ್ ಮೇಲೆಯೇ ‘ಸಾಕಪ್ಪಾ ಸಾಕು ಕಿವಿ ಮೇಲೆ ಹೂವ’ ಎಂಬ ಪೋಸ್ಟರ್ ಹಾಕಿರುವುದು ಬಯಲಾಗಿದೆ.

ಬಿಜೆಪಿ ಹಾಕಿರುವ ಬ್ಯಾನರ್ ಮೇಲೆಯೇ ಮತ್ತೊಂದು ಪೋಸ್ಟರ್ ಅಂಟಿಸಲಾಗಿದೆ. ‘ಬಿಜೆಪಿಯೇ ಭರವಸೆ’ ಎಂಬ ಪೋಸ್ಟರ್ ಮೇಲೆ ಬುರುಡೆ ಭರವಸೆ ಸಾಕು, ಕಿವಿ ಮೇಲೆ ಹೂವ’, ಸಾಕಪ್ಪಾ ಸಾಕು ಕಿವಿ ಮೇಲೆ ಹೂವ’ ಎಂಬ ಪೋಸ್ಟರ್ ಅಂಟಿಸಲಾಗಿದೆ.


Provided by

ನಂತೂರು, ಬಿಕರ್ನಕಟ್ಟೆ, ಕೋರ್ಟ್ ರಸ್ತೆ ಸೇರಿದಂತೆ ಮೊದಲಾದೆಡೆ ಬ್ಯಾನರ್ ಮೇಲೆ ಪೋಸ್ಟರ್ ಅಂಟಿಸಿರುವುದು ಕಂಡು ಬಂದಿದೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಿದ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕಿವಿಯ ಮೇಲೆ ಹೂವು ಇಟ್ಟುಕೊಂಡು ಬಂದು ರಾಜ್ಯ ಬಜೆಟ್ ಬಗ್ಗೆ ವ್ಯಂಗ್ಯವಾಡಿದ್ದರು.

congress vs bjp

ಇದರ ಬೆನ್ನಿಗೆ ಬಿಜೆಪಿ ತನ್ನ ಪ್ರಚಾರಕ್ಕೆ ಹಾಕಿರುವ ಬ್ಯಾನರ್ ಮೇಲೆ ‘ಕಿವಿ ಮೇಲೆ ಹೂವು’ ಇಟ್ಟುಕೊಂಡಿರುವ ಪೋಸ್ಟರ್ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ