ಮತ್ತೊಂದು ಧರ್ಮ ರಾಜಕೀಯ: ಹಿಂದೂಗಳ ಬಳಿ ಮಾತ್ರ ವ್ಯಾಪಾರ ಮಾಡಿ ಎಂಬ ಪೋಸ್ಟರ್ ಪತ್ತೆ
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಮತ್ತೊಂದು ಧರ್ಮ ರಾಜಕೀಯ ಆರಂಭವಾಗಿದ್ದು, ತರೀಕೆರೆ ತಾಲೂಕಿನ ಸೋಂಪುರ ಗ್ರಾಮದ ಐತಿಹಾಸಿಕ ಜಾತ್ರೆಯಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಅನ್ನೋ ವಿವಾದ ಸೃಷ್ಟಿಸಲಾಗಿದೆ.
ಎಲ್ಲಿ ಕೇಸರಿ ಧ್ವಜ ಹಾರುತ್ತೋ ಅಲ್ಲಿ ಮಾತ್ರ ವ್ಯಾಪಾರ ಮಾಡಿ, ನಮ್ಮ ದೇವರ ಹೆಸರಲ್ಲಿ ವ್ಯಾಪಾರ ಮಾಡಿ ನಮ್ಮ ದೇವರನ್ನೇ ಬೈಯುತ್ತಾರೆ, ಹಿಂದೂಗಳ ಬಳಿ ವ್ಯಾಪಾರ ಮಾಡಿ ಉಗ್ರ ಚಟುವಟಿಕೆಗೆ ಹೋಗೋ ಹಣ ತಡೆಯಿರಿ ಎಂಬಿತ್ಯಾದಿ ಶಬ್ದಗಳ ಕರಪತ್ರಗಳು ಇದೀಗ ಹರಿದಾಡುತ್ತಿವೆ.
ತರೀಕೆರೆ ತಾಲೂಕಿನ ಸೋಂಪುರ ಗ್ರಾಮದ ಐತಿಹಾಸಿಕ ಜಾತ್ರೆ , 21 ರಿಂದ 24ರವರೆಗೆ ನಡೆಯಲಿದೆ. ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿರೋ ಸೋಮೇಶ್ವರ ಸ್ವಾಮಿ ಜಾತ್ರೆ ಆರಂಭಕ್ಕೆ ವಾರದ ಮುಂಚಿತವಾಗಿ ಈ ರೀತಿಯ ಕರಪತ್ರಗಳು ಕಾಣಿಸಿಕೊಂಡಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw