ಜೈಲು ಪಾಲಾಗಿರುವ ನಟಿ ರನ್ಯಾ ರಾವ್ ಗೆ ಮತ್ತೊಂದು ಶಾಕ್: ಪತಿಯಿಂದ ವಿಚ್ಛೇದನ ನೀಡಲು ಸಿದ್ಧತೆ

ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್ ಜಾಮೀನು ಅರ್ಜಿ ಒಂದೆಡೆ ರದ್ದಾಗಿದೆ. ಇನ್ನೊಂದೆಡೆ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ ರನ್ಯಾ ವಿರುದ್ಧ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ.
2024 ಅಕ್ಟೋಬರ್ 6 ರಂದು ಬೆಂಗಳೂರಿನ ಬಾಸ್ಟಿನ್ ರೆಸ್ಟೋರೆಂಟ್ನಲ್ಲಿ ರನ್ಯಾ, ಜತಿನ್ ಇಬ್ಬರೂ ಮದುವೆ ಬ್ರೋಕರ್ ಮೂಲಕ ಭೇಟಿಯಾಗಿದ್ದರು. 2024 ಅಕ್ಟೋಬರ್ 23ರಂದು ರನ್ಯಾ, ಜತಿನ್ ಎಂಗೇಜ್ ಮೆಂಟ್ ಆಗಿತ್ತು. 2024 ನವೆಂಬರ್ 27 ರಂದು ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಮದುವೆ ಕೂಡ ಆಗಿತ್ತು. ಬಳಿಕ ಲ್ಯಾವೆಲ್ಲೆ ರಸ್ತೆಯ ಅಪಾರ್ಟ್ ಮೆಂಟ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.
ಮದುವೆಯಾದ ಒಂದೇ ತಿಂಗಳಿಗೆ ರನ್ಯಾ, ಜತಿನ್ ನಡುವೆ ಮನಸ್ತಾಪ ಶುರುವಾಗಿದ್ದು, ಸಂಬಂಧದಲ್ಲಿ ಪಾರದರ್ಶಕತೆ ಇಲ್ಲ, ಮಾತುಕತೆಯೂ ಇರಲಿಲ್ಲವೆಂದು ಪತಿ ಜತಿನ್ ಹುಕ್ಕೇರಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಮದುವೆಯಾದ ಎರಡೇ ತಿಂಗಳಿಗೆ ರನ್ಯಾ ದುಬೈಗೆ ಓಡಾಟ ನಡೆಸಿದ್ದರು. ಪದೇ ಪದೆ ರನ್ಯಾ ದುಬೈ ಟ್ರಿಪ್ಗೆ ಹೋಗುತ್ತಿದ್ದು, ಪತಿಗೆ ಅನುಮಾನ ಬಂದು ಜಗಳ ನಡೆದಿತ್ತು ಎನ್ನಲಾಗಿದೆ.
ರನ್ಯಾರಾವ್ ಅರೆಸ್ಟ್ ಆದ ಮೇಲೆ ಪತಿ ಜತೀನ್ ಹುಕ್ಕೇರಿಯನ್ನೂ ಡಿಆರ್ಐ ಅಧಿಕಾರಿಗಳು ವಿಚಾರಣೆ ಮಾಡಿದ್ದರು. ಇದರಿಂದ ಬಂಧನ ಭೀತಿಗೆ ಒಳಗಾಗಿದ್ದ ಜತೀನ್ ಹೈಕೋರ್ಟ್ ಮೆಟ್ಟಲೇರಿದ್ದರು. ಜತಿನ್ ಹುಕ್ಕೇರಿ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದರು. ಪತ್ನಿಯ ಮೇಲಿನ ಆರೋಪಕ್ಕೂ ಜತಿನ್ಗೂ ಸಂಬಂಧವಿಲ್ಲ. ಮದುವೆಯಾದ ಒಂದೇ ತಿಂಗಳಿಗೆ ಇಬ್ಬರ ನಡುವೆ ಮನಸ್ತಾಪ ಇತ್ತು ಎಂದು ಉಲ್ಲೇಖಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: