ಕೌತುಕ: ದುಬೈಯಲ್ಲಿ ಇನ್ನೊಂದು ಅತಿ ಎತ್ತರದ ಕಟ್ಟಡ ನಿರ್ಮಾಣ: ಅದ್ಯಾವುದು ಗೊತ್ತಾ..? - Mahanayaka
10:57 PM Thursday 12 - December 2024

ಕೌತುಕ: ದುಬೈಯಲ್ಲಿ ಇನ್ನೊಂದು ಅತಿ ಎತ್ತರದ ಕಟ್ಟಡ ನಿರ್ಮಾಣ: ಅದ್ಯಾವುದು ಗೊತ್ತಾ..?

10/09/2024

ಜಗತ್ತಿನಲ್ಲಿಯೇ ಅತಿ ಎತ್ತರದ ಕಟ್ಟಡ ಎಲ್ಲಿದೆ ಎಂದು ಕೇಳಿದರೆ ತಕ್ಷಣ ದುಬೈಯಲ್ಲಿದೆ ಎಂಬ ಉತ್ತರ ಬರುತ್ತೆ. ಹೌದು. ದುಬೈಯಲ್ಲಿರುವ ಬುರ್ಜ್ ಖಲೀಫಾ ಜಗತ್ತಿನಲ್ಲಿಯೇ ಅತ್ಯಂತ ಎತ್ತರದ ಕಟ್ಟಡವಾಗಿ ಗುರುತಿಸಿಕೊಂಡಿದೆ. ಮಾತ್ರವಲ್ಲ, ಪ್ರತಿದಿನ ಸಾವಿರಾರು ಮಂದಿ ಈ ಕಟ್ಟಡವನ್ನು ನೋಡುವುದಕ್ಕೆಂದೇ ಬರುತ್ತಿದ್ದಾರೆ.

ಇದೀಗ ದುಬೈಯಲ್ಲಿ ಇನ್ನೊಂದು ಅತಿ ಎತ್ತರದ ಕಟ್ಟಡ ನಿರ್ಮಾಣವಾಗುತ್ತಿದೆ. ಅದರ ಹೆಸರು ಬುರ್ಜ್ ಅಝೀಝಿ. ಬುರ್ಜ್ ಖಲೀಫಾ 830 ಮೀಟರ್ ಎತ್ತರವಿದ್ದರೆ ಈ ಹೊಸ ಬುರ್ಜ್ ಅಝೀಝಿ ಕಟ್ಟಡವು 725 ಮೀಟರ್ ಎತ್ತರವಿರಲಿದೆ. ದುಬೈ ಶೈಖ್ ಝಾಹಿದ್ ರಸ್ತೆಯ ಪಕ್ಕದಲ್ಲಿ ಈ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಈ ಹೊಸ ಕಟ್ಟಡವು 131 ಅಂತಸ್ತುಗಳನ್ನು ಹೊಂದಲಿದೆ. ಪ್ರಮುಖ ರಿಯಲ್ ಎಸ್ಟೇಟ್ ನಿರ್ಮಾಣ ಸಂಸ್ಥೆಯಾದ ಅಝೀ ಝಿ ಡೆವಲಪ್ಮೆಂಟ್ ಸಂಸ್ಥೆಯು ಈ ಹೊಸ ಕಟ್ಟಡವನ್ನು ನಿರ್ಮಿಸುವ ಹೊಣೆಗಾರಿಕೆಯನ್ನು ವಹಿಸಿಕೊಂಡಿದೆ.

ಮುಂದಿನ ವರ್ಷದ ಫೆಬ್ರವರಿಯಲ್ಲಿ ಇದರ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ.2028 ರಲ್ಲಿ ಇದರ ಕೆಲಸವನ್ನು ಪೂರ್ತಿಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಕೌಲಾಲಂಪುರದ ಮೆರ್ಡೋಕ್ ಎಂಬ ಕಟ್ಟಡವು ಎತ್ತರದಲ್ಲಿ ಜಗತ್ತಿನಲ್ಲಿಯೇ ಈಗ ಎರಡನೇ ಸ್ಥಾನದಲ್ಲಿರುವ ಕಟ್ಟಡವಾಗಿದೆ. ಇದು 679 ಮೀಟರ್ ಎತ್ತರವನ್ನು ಹೊಂದಿದ್ದು 118 ಅಂತಸ್ತುಗಳನ್ನು ಹೊಂದಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ