ಅಂತರ್ ಜಿಲ್ಲಾ ಬೈಕ್ ಕಳವು ಪ್ರಕರಣ: ಉಡುಪಿ ಪೊಲೀಸರಿಂದ ಮಂಡ್ಯದಲ್ಲಿ ಆರೋಪಿಯ ಬಂಧನ - Mahanayaka
3:22 PM Saturday 22 - February 2025

ಅಂತರ್ ಜಿಲ್ಲಾ ಬೈಕ್ ಕಳವು ಪ್ರಕರಣ: ಉಡುಪಿ ಪೊಲೀಸರಿಂದ ಮಂಡ್ಯದಲ್ಲಿ ಆರೋಪಿಯ ಬಂಧನ

udupi
22/09/2022

ಉಡುಪಿ: ಅಂತರ್ ಜಿಲ್ಲಾ ಬೈಕ್ ಕಳವು ಪ್ರಕರಣದ ಆರೋಪಿಯೊಬ್ಬನನ್ನು ಉಡುಪಿ ಪೊಲೀಸರು ಮಂಡ್ಯ ಕೆ ಆರ್ ಪೇಟೆಯಲ್ಲಿ ಬಂಧಿಸಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಳೆಹೊಸೂರು ನಿವಾಸಿ, ಗೋವಿಂದಪ್ಪ ಗಿರೀಶ ಹೇಮಣ್ಣ ಪೂಜಾರ್ ಬಂಧಿತ ಆರೋಪಿ.  ಉಡುಪಿ ನಗರದ ಹಲವು ಕಡೆ ಬೈಕ್ ಕಳ್ಳತನ ನಡೆದಿತ್ತು. ಬೀಡಿನಗುಡ್ಡೆ, ಉಡುಪಿ ಕೃಷ್ಣಮಠ ಸಮೀಪ ವಿದ್ಯೋದಯ ಶಾಲೆ ಬಳಿ ನಿಲ್ಲಿಸಿದ್ದ ಬೈಕುಗಳನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸಿಸಿ ಟಿವಿ ಅಧರಿಸಿ ತನಿಖೆ ನಡೆಸಿದ ಉಡುಪಿ ನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತ ರಾಜ್ಯದ ನಾನಾ ಕಡೆಗಳಲ್ಲಿ ಬೈಕ್ ಕಳ್ಳತನ ಮಾಡಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಆರೋಪಿಯಿಂದ ಸುಮಾರು 5 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ