ಕೊವಿಡ್ ಸೋಂಕಿತನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ 21 ಮಂದಿ ಸಾವು - Mahanayaka
5:55 PM Wednesday 11 - December 2024

ಕೊವಿಡ್ ಸೋಂಕಿತನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ 21 ಮಂದಿ ಸಾವು

jaipura
08/05/2021

ಜೈಪುರ: ಕೊರೊನಾ ಸೋಂಕಿತನ ಮೃತದೇಹವನ್ನು ಸಾಗಿಸುವ ವೇಳೆ ಮುನ್ನೆಚ್ಚರಿಕೆ ವಹಿಸದೇ, ಕೊವಿಡ್ ಮಾರ್ಗಸೂಚಿ ಪಾಲಿಸದ ಕಾರಣ ಅಂತ್ಯಕ್ರಿಯೆ ನಡೆಸಿದ ಕೆಲವೇ ದಿನಗಳಲ್ಲಿ  21 ಜನರು ಕೊರೊನಾ ವೈರಸ್ ಗೆ ಬಲಿಯಾಗಿರುವ ದಾರುಣ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದಿದೆ.

ಏಪ್ರಿಲ್ 21ರಂದು ಕೊವಿಡ್ ಸೋಂಕಿತನ ಮೃತದೇಹವನ್ನು ಖೀರ್ವಾ ಗ್ರಾಮಕ್ಕೆ ತರಲಾಗಿತ್ತು. ಅಂತ್ಯಕ್ರಿಯೆಯಲ್ಲಿ ಸುಮಾರು 150 ಜನರು ಭಾಗಿಯಾಗಿದ್ದರು. ಮೃತದೇಹವನ್ನು ಪ್ಲಾಸ್ಟಿಕ್ ನಿಂದ ಹೊರತೆಗೆದು ಕುಟುಂಬಸ್ಥರು ಮೃತದೇಹವನ್ನು ಮುಟ್ಟಿದ್ದರು. ಯಾವುದೇ ಎಚ್ಚರಿಕೆಯನ್ನೂ ತೆಗೆದುಕೊಂಡಿರಲಿಲ್ಲ.

21 ಸಾವುಗಳ ಪೈಕಿ 3-4 ಸಾವುಗಳು ಮಾತ್ರವೇ ಕೊರೊನಾದಿಂದ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದು, ಉಳಿದವರು ವೃದ್ಧಾಪ್ಯ ಹಾಗೂ ಇನ್ನಿತರ ಕಾರಣಗಳಿಂದ ಮೃತಪಟ್ಟಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಮೃತಪಟ್ಟವರೆಲ್ಲರೂ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದವರೇ ಆಗಿದ್ದಾರೆ.

ಇನ್ನೂ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದವರ ಕುಟುಂಬಗಳ ಮಾದರಿಯನ್ನು ಸಂಗ್ರಹಿಸಿದ್ದೇವೆ. ಪರೀಕ್ಷೆಯ ವರದಿಯ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು  ಲಕ್ಷ್ಮಣ್ಗಡ ಉಪವಿಭಾಗೀಯ ಅಧಿಕಾರಿ  ಕುಲ್ರಾಜ್ ಮೀನಾ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ