ಶಾಕಿಂಗ್ ನ್ಯೂಸ್: ಅಂತ್ಯಕ್ರಿಯೆಗೆ ಸಾಗಿಸುತ್ತಿರುವಾಗ ಉಸಿರಾಡಿದ ಮಹಿಳೆ
![covid pesant](https://www.mahanayaka.in/wp-content/uploads/2021/05/covid-pesant.jpg)
ಲಕ್ನೋ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರನ್ನು ಮಾಧ್ಯಮ ಹೊಗಳುವುದನ್ನು ಕಂಡು ಅದು ಭೂಲೋಕದ ಸ್ವರ್ಗ ಎಂದೇ ಜನರು ಭಾವಿಸುತ್ತಾರೆ. ಆದರೆ ಕೊರೊನಾ ಕಾಲದಲ್ಲಿ ಅಲ್ಲಿನ ಸ್ಥಿತಿಗಳ ನಿಜವಾದ ವರದಿ ನೋಡಿದರೆ, ಬಹಳ ಹೀನಾಯ ಸ್ಥಿತಿಯಲ್ಲಿದೆ.
ಜೀವಂತವಿದ್ದ ಮಹಿಳೆಯೊಬ್ಬರನ್ನು ಸ್ಮಶಾನಕ್ಕೆ ಸಾಗಿಸಿದ ಘಟನೆ ಉತ್ತರಪ್ರದೇಶದ ಲಕ್ನೋನ ಡಾ.ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ನಡೆದಿದ್ದು, ಆಸ್ಪತ್ರೆಯಲ್ಲಿ ಮಹಿಳೆ ಸಾವಿಗೀಡಾಗಿದ್ದಾರೆ ಎಂದು ಘೋಷಿಸಿ ಸ್ಮಶಾನಕ್ಕೆ ರವಾನಿಸಲಾಗಿದ್ದು, ಈ ವೇಳೆ ಮಹಿಳೆ ಉಸಿರಾಡುತ್ತಿರುವುದು ಬೆಳಕಿಗೆ ಬಂದಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಮಹಿಳೆಯೊಬ್ಬರನ್ನು ದಾಖಲಿಸಲಾಗಿತ್ತು. ಅವರಿಗೆ ಕೊರೊನಾ ನೆಗೆಟಿವ್ ವರದಿ ಬಂದಿತ್ತು. ಆದರೆ ಉಸಿರಾಟದ ಸಮಸ್ಯೆ ಕಂಡು ಬಂದಿದ್ದರಿಂದ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಆದರೆ ಅವರು ದೇಹದಲ್ಲಿ ಆಕ್ಸಿಜನ್ ಕೊರತೆಯಿಂದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದರು.
ಕುಟುಂಬಸ್ಥರು ಅಂತ್ಯಕ್ರಿಯೆಗೆಂದು ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಮಹಿಳೆ ಉಸಿರಾಡುತ್ತಿರುವುದು ಕುಟುಂಬಸ್ಥರ ಗಮನಕ್ಕೆ ಬಂದಿದೆ. ತಕ್ಷಣವೇ ಅವರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಬ್ಬ ವ್ಯಕ್ತಿ ಸತ್ತಿದ್ದಾನೋ ಬದುಕಿದ್ದಾನೋ ಎಂದು ವಿದ್ಯಾಭ್ಯಾಸ ಇಲ್ಲದ ಹಳ್ಳಿ ಪ್ರದೇಶದ ಜನರೇ ಪರೀಕ್ಷೆ ಮಾಡಿ ಹೇಳುತ್ತಾರೆ. ಆದರೆ, ಡಿಗ್ರಿ, ಎಂಬಿಬಿಎಸ್ ಎಂದೆಲ್ಲ ಪದವಿಗಳನ್ನು ಪಡೆದುಕೊಂಡು ವೈದ್ಯರಾಗಿರುವವರಿಗೆ ಒಬ್ಬ ವ್ಯಕ್ತಿ ಬದುಕಿದ್ದಾನೋ ಸತ್ತಿದ್ದಾನೋ ಎನ್ನುವುದನ್ನೂ ಕಂಡು ಹಿಡಿಯಲು ಸಾಧ್ಯವಿಲ್ಲ ಎಂದರೆ, ಅವರು ಯಾವ ಸೀಮೆಯ ವೈದ್ಯರು ಎನ್ನುವ ಮಾತುಗಳು ಕೇಳಿ ಬಂದಿದೆ. ಇದೇ ರೀತಿಯಾಗಿ ಬದುಕಿದ್ದ ಎಷ್ಟು ಜನರನ್ನು ಜೀವಂತವಾಗಿ ಸುಟ್ಟಿದ್ದಾರೋ ಎನ್ನುವ ಶಂಕೆ ವ್ಯಕ್ತವಾಗಿದ್ದು, ಜನರಲ್ಲಿ ಆತಂಕ ಮೂಡಿದೆ.