ಆರ್ಯನ್ ಖಾನ್ ಭಾಗವಹಿಸಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದಿದ್ದ ಬಿಜೆಪಿ ನಾಯಕನ ಭಾವನನ್ನು ಬಿಡುಗಡೆ ಮಾಡಲಾಗಿದೆ | ಎನ್‌ ಸಿಪಿ ನಾಯಕ ಗಂಭೀರ ಆರೋಪ - Mahanayaka
6:10 PM Wednesday 5 - February 2025

ಆರ್ಯನ್ ಖಾನ್ ಭಾಗವಹಿಸಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದಿದ್ದ ಬಿಜೆಪಿ ನಾಯಕನ ಭಾವನನ್ನು ಬಿಡುಗಡೆ ಮಾಡಲಾಗಿದೆ | ಎನ್‌ ಸಿಪಿ ನಾಯಕ ಗಂಭೀರ ಆರೋಪ

nawab malik
09/10/2021

ಮುಂಬೈ:  ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಸಿದ ವೇಳೆ ಮಾದಕ ವಸ್ತು ನಿಯಂತ್ರಣ ಅಧಿಕಾರಿಗಳು(NCB) ದಾಳಿ ನಡೆಸಿ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಸಹಿತ 11 ಮಂದಿಯನ್ನು  ಬಂಧಿಸಿತ್ತು. ಈ ಪೈಕಿ ಮೂವರನ್ನು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಗೊಂಡವರ ಪೈಕಿ ಬಿಜೆಪಿ ನಾಯಕ ಮೋಹಿತ್‌ ಭಾರತೀಯ ಅವರ ಬಾವ ಕೂಡ ಒಬ್ಬರು ಎಂದು ಎಂದು ಎನ್‌ ಸಿಪಿ ನಾಯಕ, ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್‌ ಮಲಿಕ್ ಆರೋಪಿಸಿದ್ದಾರೆ.

ಎನ್‌ ಸಿಬಿ ಬಿಡುಗಡೆ ಮಾಡಿದ ಮೂವರು ವ್ಯಕ್ತಿಗಳಲ್ಲಿ ಮೋಹಿತ್ ಭಾರತೀಯ ಬಾವ ರಿಷಭ್ ಸಚ್‌ ದೇವ್‌ ಒಬ್ಬರು. ಇನ್ನಿಬ್ಬರ ಹೆಸರು ಪ್ರತೀಕ್ ಗಬ್ಬಾ ಮತ್ತು ಅಮಿರ್ ಫರ್ನೀಚರ್‌ ವಾಲಾ. ಇವರು ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಕ್ರ್ಯೂಸ್ ಪಾರ್ಟಿಗೆ ಕರೆತಂದಿದ್ದವರು. ಸಚ್‌ ದೇವ್‌ ಅವರೊಂದಿಗೆ ಈ ಇಬ್ಬರನ್ನೂ ಎನ್‌ ಸಿಬಿಯವರು ಬಂಧಿಸಿದ ಎರಡು ಗಂಟೆಗಳ ನಂತರ ಬಿಡುಗಡೆ ಮಾಡಿದ್ದಾರೆ ಎಂದು ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಲಿಕ್ ಆರೋಪಿಸಿದ್ದಾರೆ.

ಕ್ರೂಸ್ ಪಾರ್ಟಿ ಪ್ರಕರಣದಲ್ಲಿ ಆರ್ಯನ್ ಖಾನ್ ಸೇರಿದಂತೆ ಒಟ್ಟು 18 ಜನರನ್ನು ಬಂಧಿಸಲಾಗಿದೆ. ಬಿಡುಗಡೆ ಮಾಡಿರುವ ಮೂವರ ಜೊತೆಗೆ ಎನ್‌ ಸಿಬಿ ಪ್ರಾದೇಶಿಕ ನಿರ್ದೇಶಕ ಸಮೀರ್ ವಾಂಖೇಡೆ ಅವರ ದೂರವಾಣಿ ಕರೆಗಳನ್ನು ಪರಿಶೀಲಿಸಬೇಕೆಂದು ಮಲಿಕ್ ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ರಿಷಭ್ ಸಚ್‌ ದೇವ ಬಂಧನವಾದಾಗ, ಅವರ ತಂದೆ ಮತ್ತು ಚಿಕ್ಕಪ್ಪ ಇಬ್ಬರೂ ಎನ್‌ ಸಿಬಿ ಕಚೇರಿಗೆ ಭೇಟಿ ನೀಡಿದ್ದಾರೆ. ಅಂದು ವಾಂಖೆಡೆ, ಮುಂಬೈ, ದೆಹಲಿಯ ಬಿಜೆಪಿ ನಾಯಕರೊಂದಿಗೆ ದೂರವಾಣಿಯಲ್ಲಿ ಮಾತಾಡಿದ್ದಾರೆ. ಇದೆಲ್ಲವೂ ಸಚ್‌ ದೇವ್‌ ಅವರ ತಂದೆಯ ದೂರವಾಣಿಯಿಂದಲೇ ನಡೆದಿವೆ ಎಂದು ಅವರು ಆರೋಪಿಸಿದ್ದಾರೆ.

ಎನ್‌ ಸಿಬಿಯವರು ಕ್ರೂಸ್ ಹಡಗಿನ ಮೇಲೆ ನಡೆಸಿರುವ ದಾಳಿ ನಕಲಿ, ಪೂರ್ವಯೋಜಿತ. ಇದು ಇಡೀ ಸಿನಿಮಾ ಕ್ಷೇತ್ರ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರುವುದಕ್ಕಾಗಿ ಮಾಡಿರುವ ಸಂಚು ಎಂದು ಮಲಿಕ್ ಗಂಭೀರ ಆರೋಪಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಗಂಗೊಳ್ಳಿ: ಹಿಂದೂಗಳ ಮೀನುಮಾರುಕಟ್ಟೆಯನ್ನು ಮುಸ್ಲಿಮರು ಬಹಿಷ್ಕರಿಸಿದ್ದು ಯಾಕೆ? | ಒಂದೇ ತಾಯಿ ಮಕ್ಕಳಂತಿದ್ದವರ ನಡುವೆ ಏನಿದು ಗಲಾಟೆ?

ಶಾಕಿಂಗ್ ನ್ಯೂಸ್: ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಮಹಿಳೆಯ ಕೊಳೆತ ಶವಪತ್ತೆ!

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ಸತ್ಯಜಿತ್ ಆರೋಗ್ಯ ಮತ್ತಷ್ಟು ಕ್ಷೀಣ!

ರೈತರ ಮಾರಣಹೋಮ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರ ಪುತ್ರ ಪೊಲೀಸರ ಮುಂದೆ ಹಾಜರು

ಅಫ್ಘಾನಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ: 100ಕ್ಕೂ ಅಧಿಕ ಮಂದಿ ಸಾವು

ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯ ಕೈ ಹಿಡಿದೆಳೆದು ಶಿಕ್ಷಕನಿಂದ ಅಸಭ್ಯ ವರ್ತನೆ | ವಿಡಿಯೋ ವೈರಲ್

ಇತ್ತೀಚಿನ ಸುದ್ದಿ