ಕೆಂಪುಕೋಟೆಯ ಬಳಿಕ ಪಾರ್ಲಿಮೆಂಟ್ ಗೆ ನುಗ್ಗಲು ರೈತರಿಂದ ಯತ್ನ | ಕೆಂಪುಕೋಟೆಯನ್ನು ಆಕ್ರಮಿಸಿಕೊಂಡಿರುವ ರೈತರು
ದೆಹಲಿ: ದೆಹಲಿಯಲ್ಲಿ ರೈತರ ಪ್ರತಿಭಟನೆ ಮತ್ತೆ ಮುಂದುವರಿದಿದ್ದು, ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಲು ಪೊಲೀಸರು ಮತ್ತೆ ವಿಫಲರಾಗಿದ್ದು, ಇದೀಗ ನಂಗ್ಲೋಯಿ ಪ್ರದೇಶದಲ್ಲಿ ಪ್ರತಿಭಟನೆ ಆರಂಭವಾಗಿದ್ದು, ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.
ಇನ್ನೊಂದೆಡೆ ದೆಹಲಿಯ ಕೆಂಪುಕೋಟೆಯನ್ನು ಪ್ರತಿಭಟನಾಕಾರರು ಆಕ್ರಮಿಸಿಕೊಂಡಿದ್ದು, ಕೆಂಪುಕೋಟೆಯ ಧ್ವಜಸ್ಥಂಬದಲ್ಲಿ ರೈತರು ತಮ್ಮ ಬಾವುಟವನ್ನು ಹಾರಿಸಿದ್ದಾರೆ.
ರೈತರನ್ನು ಮನವೊಲಿಸಿ, ಬಾವುಟವನ್ನು ಕೆಳಗಿಳಿಸಲು ಪೊಲೀಸರು ಪ್ರಯತ್ನಿಸಿದರು. ಓರ್ವ ಪೊಲೀಸ್ ಸಿಬ್ಬಂದಿ ಬಾವುಟ ಕೆಳಗಿಳಿಸಲು ಯತ್ನಿಸಿದರಾದರೂ, ಈ ವೇಳೆ ರೈತರು ಆಕ್ರೋಶದಲ್ಲಿ ಘೋಷಣೆ ಕೂಗಿದ್ದು, ಇದರಿಂದಾಗಿ ಅವರು ಕೆಳಗಿಳಿದಿದ್ದಾರೆ.
ಕೆಂಪುಕೋಟೆಯ ಧ್ವಜಸ್ಥಂಬದಲ್ಲಿ ಈಗಲೂ ರೈತರ ಬಾವುಟವೇ ಹಾರುತ್ತಿದೆ. ಇದೇ ಸಂದರ್ಭದಲ್ಲಿ ನಂಗ್ಲೋಯಿ ಪ್ರದೇಶದಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.
ಪೊಲೀಸರು ಕೆಂಪುಕೋಟೆಯ ಬಳಿಕ ಪಾರ್ಲಿಮೆಂಟ್ ಗೆ ನುಗ್ಗಲು ಮುಂದಾಗುತ್ತಿದ್ದಾರೆ. ಈಗಾಗಲೇ ಒಂದು ಭಾರಿ ರೈತರು ವಿಫಲ ಯತ್ನ ನಡೆಸಿದ್ದಾರೆ. ಬಸ್ ಗಳನ್ನು ಅಡ್ಡಲಾಗಿ ಇರಿಸಿದ ಪೊಲೀಸರು ಪ್ರತಿಭಟನಾಕಾರರು ಪಾರ್ಲಿಮೆಂಟ್ ಗೆ ನುಗ್ಗದಂತೆ ಹಿಮ್ಮೆಟ್ಟಿಸಿದ್ದಾರೆ. ಆದರೆ ರೈತರು ಮತ್ತೆ ಮತ್ತೆ ಪ್ರಯತ್ನಿಸುತ್ತಿದ್ದಾರೆ.
दिल्ली: नांगलोई इलाके में प्रदर्शनकारी किसानों पर पुलिस ने आंसू गैस के गोले इस्तेमाल किए। pic.twitter.com/RP81oJVJYJ
— ANI_HindiNews (@AHindinews) January 26, 2021