ಅನುಮತಿ ಇಲ್ಲದೆ ರಸ್ತೆ ತಡೆದು ಪ್ರತಿಭಟನೆ: PFI ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
ಉಡುಪಿ: ಪೊಲೀಸರ ಅನುಮತಿಯಿಲ್ಲದೆ ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ ಆರೋಪದಡಿಯಲ್ಲಿ 11 ಮಂದಿ ಪಿಎಫ್ ಐ ಕಾರ್ಯಕರ್ತರ ವಿರುದ್ದ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾದಿಕ್ ಅಹಮ್ಮದ್ (40), ಅಫ್ರೋಜ್ ಕೆ (39), ಇಲಿಯಾಸ್ ಸಾಹೇಬ್(46), ಇರ್ಷಾದ್ (37), ಫಯಾಜ್ ಅಹಮ್ಮದ್(39), ಮಹಮ್ಮದ್ ಅಶ್ರಫ್(43), ಎ. ಹಾರೂನ್ ರಶೀದ್, ಮೊಹಮ್ಮದ್ ಜುರೈಜ್ (42), ಇಶಾಕ್ ಕಿದ್ವಾಯಿ (30), ಶೌಕತ್‌ಅಲಿ (31) ಹಾಗೂ ಮಹಮ್ಮದ್ ಝಹೀದ್(24) ಎಂಬವರನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ
ನಿನ್ನೆ ಸಂಜೆ ಉಡುಪಿಯ ಡಯಾನಾ ಸರ್ಕಲ್ ಬಳಿ ಪಿಎಫ್ ಐ ಸಂಘಟನೆಗಳ ಕಚೇರಿ ಹಾಗೂ ಮನೆಗಳ ಮೇಲೆ ಎನ್ ಐಎ ದಾಳಿಯನ್ನು ಖಂಡಿಸಿ ಪಿ.ಎಫ್.ಐ ಕಾರ್ಯಕರ್ತರು ಯಾವುದೇ ಪರವಾನಿಗೆ ಇಲ್ಲದೆ ರಸ್ತೆ ತಡೆದು ಪ್ರತಿಭಟನೆ ನಡೆಸಿ, ಸಾರ್ವಜನಿಕರಿಗೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯುಂಟು ಮಾಡಿದ್ದು, ಸ್ಥಳಕ್ಕೆ ತೆರಳಿದ ಉಡುಪಿ ನಗರ ಠಾಣೆ ಪೊಲೀಸರು ಯಾವುದೇ ಪರವಾನಿಗೆ ಇಲ್ಲದ ಕಾರಣ ಪ್ರತಿಭಟನಾಕಾರರನ್ನು ಸ್ಥಳದಿಂದ ಹೋಗಲು ಸೂಚನೆ ನೀಡಿದ್ದಾರೆ. ಆದರೆ, ಕಾರ್ಯಕರ್ತರು ಸ್ಥಳದಿಂದ ತೆರಳದಿದ್ದಾಗ 11 ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಮುಂದಿನ ವಿಚಾರಣೆ ನಡೆಯುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka