ಅನುಶ್ರೀ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂದು ನಾನು ಹೇಳಿಲ್ಲ | ಉಲ್ಟಾ ಹೊಡೆದ ಕೊರಿಯೋಗ್ರಾಫರ್ ಕಿಶೋರ್ ಅಮನ್ ಶೆಟ್ಟಿ!
ಬೆಂಗಳೂರು: ನಿರೂಪಕಿ ಅನುಶ್ರೀ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂಬ ಹೇಳಿಕೆಯನ್ನು ನಾನು ನೀಡಿಲ್ಲ ಎಂದು ಕೊರಿಯೋಗ್ರಾಫರ್ ಕಿಶೋರ್ ಅಮನ್ ಶೆಟ್ಟಿ ಹೇಳಿಕೆ ನೀಡಿದ್ದು, ನಾನು ಅವರಿಗೆ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿದ್ದೇನೆ. ಅದನ್ನು ಹೊರತು ಪಡಿಸಿ ನಾನು ಬೇರೇನೂ ಹೇಳಿಲ್ಲ. ಅನುಶ್ರೀ ಮಾದಕ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದರು, ಅದನ್ನು ನಮಗೂ ಕೊಡುತ್ತಿದ್ದರು ಎನ್ನುವುದೆಲ್ಲ ಸುಳ್ಳು ಎಂದು ಅವರು ಹೇಳಿದ್ದಾರೆ.
ಕಿಶೋರ್ ಅಮನ್ ಶೆಟ್ಟಿ ಮಂಗಳೂರು ಸಿಸಿಬಿ ಪೊಲೀಸರಿಂದ ಡ್ರಗ್ಸ್ ಸಾಗಾಣಿಕೆ ಹಾಗೂ ಮಾರಾಟ ಪ್ರಕರಣದ ಸಂಬಂಧ ಬಂಧನಕ್ಕೊಳಗಾದ ವೇಳೆ 2020ರ ಸೆ.19ರಂದು ಹೇಳಿಕೆ ನೀಡಿದ್ದು, ತನ್ನ ವೃತ್ತಿ ಸೇರಿದಂತೆ ಹಲವು ಮಾಹಿತಿಗಳನ್ನು ನೀಡಿದ್ದ ಎಂದು ಹೇಳಲಾಗಿದೆ. ಮುಂಬೈ, ಮಂಗಳೂರು, ಕೇರಳ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಅನೇಕ ಕಡೆ ಪ್ರದರ್ಶನ ನೀಡಿದ್ದೇನೆ. ಹಲವಾರು ಖಾಸಗಿ ಚಾನಲ್‍ಗಳ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದೇನೆ ಎಂದು ತಿಳಿಸಿದ್ದ ಎನ್ನಲಾಗಿದೆ.
2007-08ರ ಸಮಯದಲ್ಲಿ ಬೆಂಗಳೂರಿನ ಸಂಜಯ್ ಅವರ ಮಾಲೀಕತ್ವದ ಎಕ್ಸ್‍ಲೆನ್ಸಿ ಡ್ಯಾನ್ಸ್ ಅಕಾಡೆಮಿಯಲ್ಲಿದ್ದಾಗ ಕೊರಿಯೋಗ್ರಾಫರಾಗಿದ್ದ ನನ್ನ ಸ್ನೇಹಿತ ತರುಣ್ ಅನುಶ್ರೀ ಅವರನ್ನು ತಮಗೆ ಪರಿಚಯ ಮಾಡಿಕೊಟ್ಟಿದ್ದ. ಅವರು ಕುಣಿಯೋಣ ಬಾರ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದರು. ಫೈನಲ್ ಸ್ಪರ್ಧೆಗೆ ಅವರಿಗೆ ನಾನು ಮತ್ತು ತರುಣ್ ನೃತ್ಯ ಹೇಳಿಕೊಟ್ಟಿದ್ದೆವು. ಅದರಲ್ಲಿ ಅವರು ಗೆಲುವು ಸಾಧಿಸಿದರು.
ನೃತ್ಯ ಅಭ್ಯಾಸ ಮಾಡುವ ಸಮಯದಲ್ಲಿ ತರುಣ್ ಅವರ ಬಾಡಿಗೆ ಮನೆಯಲ್ಲಿ ಅನುಶ್ರೀ ತಡರಾತ್ರಿವರೆಗೂ ನೃತ್ಯಾಭ್ಯಾಸ ಮಾಡುತ್ತಿದ್ದರು. ಊಟ ಮಾಡುವ ಮುನ್ನ ಮಾದಕ ವಸ್ತುಗಳಾದ ಎಕ್ಸಿಟಿಸಿ ಮಾತ್ರೆಗಳನ್ನು ಸೇವನೆ ಮಾಡುತ್ತಿದ್ದರು ಎಂದು ತಿಳಿಸಿದ್ದಾನೆ ಎಂದು ಲಿಖಿತ ಹೇಳಿಕೆಯಲ್ಲಿ ನಮೂದಾಗಿದೆ. ಅನುಶ್ರೀ ಅವರು ನೃತ್ಯಾಭ್ಯಾಸಕ್ಕೆ ಬರುವಾಗ ಮಾತ್ರೆಗಳನ್ನು ಖರೀದಿಸಿ ತರುತ್ತಿದ್ದರು. ಅವು ಎಲ್ಲಿ ಸಿಗುತ್ತವೆ ಎಂಬ ಬಗ್ಗೆ ಅವರಿಗೆ ಹೆಚ್ಚು ಮಾಹಿತಿ ಇತ್ತು. ಡ್ರಗ್ ಪೆಡ್ಲರ್‍ಗಳ ಪರಿಚಯ ಕೂಡ ಅವರಿಗಿತ್ತು. ಈ ಮಾತ್ರೆಗಳನ್ನು ಸೇವಿಸುವುದರಿಂದ ಹೆಚ್ಚು ಸಮಯ ಡ್ಯಾನ್ಸ್ ಮಾಡಲು ಶಕ್ತಿ ಬರುತ್ತದೆ ಹಾಗೂ ಖುಷಿ ಸಿಗುತ್ತದೆ ಎಂದು ನಾವು ಮಾತನಾಡಿಕೊಳ್ಳುತ್ತಿದ್ದೆವು ಎಂಬ ಮೊದಲಾದ ವಿಚಾರಗಳನ್ನು ಕಿಶೋರ್ ಬಿಚ್ಚಿಟ್ಟಿದ್ದ ಎನ್ನಲಾಗಿದೆ.
ಆದರೆ ಇದೀಗ ಈ ಹೇಳಿಕೆಗಳನ್ನು ನಾನು ನೀಡಿಲ್ಲ ಎಂದು ಕಿಶೋರ್ ನಿರಾಕರಿಸಿದ್ದು, ಇಂತಹ ಯಾವುದೇ ಹೇಳಿಕೆಗಳನ್ನು ನಾನು ನೀಡಿಲ್ಲ, ಇವೆಲ್ಲ ಸುಳ್ಳು, ಅನುಶ್ರೀ ಅವರ ಕೊರಿಯೋಗ್ರಾಫರ್ ನಾನಾಗಿದೆ. ಅದನ್ನು ಹೊರತು ಪಡಿಸಿದರೆ, ಅವರ ಜೊತೆಗೆ ಬೇರೆ ಯಾವುದೇ ಸಂಪರ್ಕ ನನಗಿರಲಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.
ಇನ್ನಷ್ಟು ಸುದ್ದಿಗಳು…
ಐದು ರಾಜ್ಯಗಳ ಚುನಾವಣಾ ಉಸ್ತುವಾರಿಗಳ ಹೆಸರು ಪ್ರಕಟಿಸಿದ ಬಿಜೆಪಿ: ಶೋಭಾ ಕರಂದ್ಲಾಜೆಗೂ ಸ್ಥಾನ
ಅನುಶ್ರೀ ಮುಖವಾಡ ಕಳಚಿದೆ, ಜೈಲಿಗೆ ಹೋಗೋದು ಪಕ್ಕಾ | ಪ್ರಶಾಂತ್ ಸಂಬರ್ಗಿ
ರವಿಶಂಕರ್ ಗುರೂಜಿ ಆಶ್ರಮದವರಿಗೇ ಮಂಕುಬೂದಿ ಎರಚಿ ವಂಚಿಸಿದ ನಕಲಿ ಐಎಎಸ್ ಅಧಿಕಾರಿ!
ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಲಾರಿ | ಕಾರಿನಲ್ಲಿದ್ದ ಇಬ್ಬರ ದುರಂತ ಸಾವು
12 ವರ್ಷದ ಬಾಲಕಿಯ ಮೇಲೆ ಮಲತಂದೆ, ನೆರೆ ಮನೆಯ ವ್ಯಕ್ತಿಯಿಂದ ಅತ್ಯಾಚಾರ!
ನಿಶ್ಚಿತಾರ್ಥವಾದ ಬೆನ್ನಲ್ಲೇ ಗಂಡಿಗೆ ಶಾಕ್ ನೀಡಿದ ಯುವತಿ | ಚಿನ್ನಾಭರಣದೊಂದಿಗೆ ಪರಾರಿ, ತಾಯಿಗೂ ಟೋಪಿ ಹಾಕಿದ ಮಗಳು!
ಪ್ರೀತಿಸಿ ವಿವಾಹವಾಗಿದ್ದವರನ್ನು ಜಾತಿಗಾಗಿ ಬೇರ್ಪಡಿಸಿದರು! | ಫೇಸ್ ಬುಕ್ ಲೈವ್ ಗೆ ಬಂದು ಯುವಕ ಆತ್ಮಹತ್ಯೆ
ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಪಿಎಸ್ ಐ ಅರ್ಜುನ್ ಗೆ ಜೈಲೇ ಗತಿ
ಮಹಿಳೆಯನ್ನು ಕೊಂದು ಅಡುಗೆ ಮನೆಯಲ್ಲಿಯೇ ಸುಟ್ಟ ಲಿವ್ ಇನ್ ಪಾಟ್ನರ್!
ನಿಫಾ ವೈರಸ್ ನ ರೋಗ ಲಕ್ಷಣಗಳೇನು ಗೊತ್ತಾ? | ರೋಗಿ ಕೋಮಾಕ್ಕೆ ಹೋಗುವ ಸಾಧ್ಯತೆ ಹೆಚ್ಚು!