ಅನುಶ್ರೀ ಮದುವೆ ಫಿಕ್ಸ್, ಹುಡುಗ ಯಾರು?: ಮಾರ್ಚ್ ನಲ್ಲಿ ಮದುವೆಯಂತೆ!
ಖ್ಯಾತ ನಿರೂಪಕಿ ಅನುಶ್ರೀ ಅವರಿಗೆ ಹೋದಲ್ಲಿ ಬಂದಲ್ಲಿ, ಮೊದಲು ಕೇಳುವ ಪ್ರಶ್ನೆ, ನಿಮ್ಮ ಮದುವೆ ಯಾವಾಗ ಅಂತ. ಆದ್ರೆ, ಇದೀಗ ಅನುಶ್ರೀ ಅವರೇ ತಮ್ಮ ಮದುವೆ ಬಗ್ಗೆ ಮಾತನಾಡಿದ್ದು, ಕೊನೆಗೂ ತುಳುನಾಡಿನ ಚೆಲುವೆ ಮದುವೆಯಾಗಲು ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ.
ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಅನುಶ್ರೀ ಅವರು ಮದುವೆ ಫಿಕ್ಸ್ ಆಗಿರುವ ಬಗ್ಗೆ ಮಾತನಾಡಿದ್ದಾರೆ. ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯರಾದ ನಟಿ ನಯನ, ಸೂರಜ್, ಜಗ್ಗ ಹಾಗೂ ಗಿಲ್ಲಿ ಜೊತೆ ಅನುಶ್ರೀ ಚಾಟ್ ಶೋ ನಡೆಸುತ್ತಿರುವ ಸಂದರ್ಭದಲ್ಲಿ ಅನುಶ್ರೀ ಮದುವೆ ಬಗ್ಗೆ ಹೇಳಿಕೊಂಡಿದ್ದಾರೆ. ಜೊತೆಗೆ ಮದುವೆಯ ದಿನಾಂಕ ಕೂಡ ಹೇಳಿಕೊಂಡಿದ್ದಾರೆ.
ಕಾಮಿಡಿ ಕಿಲಾಡಿಗಳ ಜೊತೆಗೆ ಸಂದರ್ಶನದಲ್ಲಿ ಸಂದರ್ಭವೊಂದರಲ್ಲಿ ಮಾತನಾಡಿದ ಅನುಶ್ರೀ ಮದುವೆ ಆದವರು ಒಂದೆಡೆ, ಮದುವೆ ಆಗದವರು ಒಂದು ಕಡೆ ಚೆನ್ನಾಗಿ ಕುಳಿತಿದ್ದಾರೆ ಎನ್ನುತ್ತಾರೆ. ಆಗ ಗಿಲ್ಲಿ , ಅನು ಅಕ್ಕ ಮಧ್ಯದಲ್ಲಿ ಕುಳಿತ ನೀವೂ ಆಲ್ ರೆಡಿ ಫಿಕ್ಸ್ ಆಗಿದ್ದೀರಾ ಎಂದು ಪ್ರಶ್ನೆ ಮಾಡುತ್ತಾರೆ. ಈ ವೇಳೆ ಅನುಶ್ರೀ ಹೌದು ನಾನು ಫಿಕ್ಸ್ ಆಗಿದ್ದೇನೆ ಎಂದು ಹೇಳಿದ್ದಾರೆ.
ಮುಂದಿನ ಫೆಬ್ರವರಿಯಲ್ಲಿ ಮದುವೆ ನಡೆಯಬಹುದಾ ಎಂದು ಸೂರಜ್ ಪ್ರಶ್ನೆ ಮಾಡುತ್ತಾರೆ. ಈ ವೇಳೆ ಅನುಶ್ರೀ ಇಲ್ಲ ಕಣ್ರೋ ನಾನು ಅಪ್ಪು ಫ್ಯಾನ್. ಹೀಗಾಗಿ ಮಾರ್ಚ್ ನಲ್ಲಿ ಮದುವೆ ಆಗಬಹುದು ಎಂದು ಹೇಳಿದ್ದಾರೆ.
ಮಾರ್ಚ್ 17ರಂದು ಪುನೀತ್ ರಾಜ್‌ಕುಮಾರ್ ಜನ್ಮದಿನ. ಇದೇ ದಿನ ಅಥವಾ ಮಾರ್ಚ್ ತಿಂಗಳಲ್ಲಿ ಅನುಶ್ರೀ ಮದುವೆ ಆಗುವ ಸುಳಿವು ನೀಡಿದ್ದಾರೆ ಅಂತ ಹೇಳಲಾಗಿದೆ.
ಈ ಮಾತುಕತೆ ತಮಾಷೆಗೆ ನಡೆಯಿತೇ? ಅಥವಾ ನಿಜವೇ ಎನ್ನುವುದು ತಿಳಿದಿಲ್ಲ. ಆದರೂ ಅನುಶ್ರೀ ಮದುವೆ ವಿಚಾರವಂತೂ ಆಗಾಗ ಸುದ್ದಿಯಾಗುತ್ತಲೇ ಇದೆ. ಈ ಬಾರಿಯೂ ಸುದ್ದಿಯಾಗಿದೆ. ಹುಡುಗ ಯಾರು ಅನ್ನೋದು ಇದೀಗ ಅನುಶ್ರೀ ಅಭಿಮಾನಿಗಳಿಗೆ ತಲೆಕೆಡಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: