ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಬರ್ಬರ ಹತ್ಯೆ! - Mahanayaka
8:51 AM Tuesday 9 - September 2025

ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಬರ್ಬರ ಹತ್ಯೆ!

rajasthan dalith
11/10/2021

ರಾಜಸ್ಥಾನ: ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ದಲಿತ(Dalith) ಯುವಕನನ್ನು  ಜಾತಿ ಪೀಡಕರ ಗುಂಪೊಂದು ಥಳಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ  ರಾಜಸ್ಥಾನದ ಹನುಮನ್ ಗರ್ ನಲ್ಲಿ ನಡೆದಿದೆ.


Provided by

ದಲಿತ ಯುವಕನೊಬ್ಬ ಅನ್ಯಜಾತಿ ಯುವತಿಯನ್ನ ಪ್ರೀತಿಸುತ್ತಿದ್ದು, ಆತ ಗ್ರಾಮದಿಂದ ಇದಕ್ಕಿದ್ದಂತೆ ನಾಪತ್ತೆಯಾಗಿದ್ದ.  ಆ ಬಳಿಕ ಆತನ ಶವ ಪತ್ತೆಯಾಗಿತ್ತು. ಕುಟುಂಬಸ್ಥರು ಇದನ್ನ ಕಂಡು ಆಘಾತಕ್ಕೆ ಒಳಗಾಗಿದ್ದರು.

ಆರಂಭದಲ್ಲಿ ಯುವಕ ಹೇಗೆ ಮೃತಪಟ್ಟಿದ್ದ ಎನ್ನುವುದು ಪೋಷಕರಿಗೆ ತಿಳಿದಿರಲಿಲ್ಲ. ಆದರೆ, ಆ ಬಳಿಕ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಹೀಗಾಗಿ ತಮ್ಮ ಪುತ್ರನನ್ನು ಜಾತಿಯ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ ಎನ್ನುವುದು ಪೋಷಕರಿಗೆ ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ 11 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಡಿಜಿಟಲ್ ಇಂಡಿಯಾದ ಬಗ್ಗೆ ಮಾತನಾಡುತ್ತಿರುವ ನಮ್ಮ ದೇಶದಲ್ಲಿ ಇನ್ನೂ ಕೂಡ ಜಾತಿ ಅಸ್ಪೃಶ್ಯತೆ ತಾಂಡವವಾಡುತ್ತಿದೆ.

ಮಹಾನಾಯಕ(Mahanayaka) ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ತಗಡಿನ ಶೆಡ್ ಗೆ ತಗಲಿದ ವಿದ್ಯುತ್: ಸಹೋದರರಿಬ್ಬರ ದಾರುಣ ಸಾವು

ಜೋರು ಮಳೆಯ ವೇಳೆ ಮರದಡಿಯಲ್ಲಿ ನಿಂತಿದ್ದ ತಂದೆ ಮಗನಿಗೆ ಬಡಿದ ಸಿಡಿಲು | ತಂದೆಯ ದಾರುಣ ಸಾವು

ಮೋದಿ ಸರ್ಕಾರ ಕಾರ್ಮಿಕ, ರೈತ ಕಾನೂನುಗಳನ್ನು ದುರ್ಬಲಗೊಳಿಸುತ್ತಿದೆ | CPIM ಮುಖಂಡ ವಸಂತ ಆಚಾರಿ

ವಿಚಿತ್ರ ಫೋಟೋ ಹಂಚಿಕೊಂಡು ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಮೋಹಕ ತಾರೆ ರಮ್ಯಾ!

ಡ್ರಾಪ್ ಕೊಡುವ ನೆಪದಲ್ಲಿ ಬೈಕ್ ನಲ್ಲಿ ಕರೆದೊಯ್ದು ಯುವಕನ ಮೇಲೆ ಅತ್ಯಾಚಾರ!

ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ಐವರು ಸಾವು | ಇಬ್ಬರು ಮಕ್ಕಳ ಸ್ಥಿತಿ ಗಂಭೀರ

“ಧೈರ್ಯವಿದ್ದರೆ ಗುಡ್ಡೆ ಮೈದಾನಕ್ಕೆ ಬಾ” ಎಂದು ಕರೆದು ಸಹೋದರರಿಬ್ಬರ ಮೇಲೆ 20ಕ್ಕೂ ಅಧಿಕ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ!

ಪೊಲೀಸರು ನನ್ನ ಬೆನ್ನು ಮುರಿಯುವಂತೆ ಹೊಡೆದಿದ್ದರು | ಹಳೆಯ ನೆನಪು ಹಂಚಿಕೊಂಡ ಗೃಹ ಸಚಿವರು

ಇತ್ತೀಚಿನ ಸುದ್ದಿ