ಬಾಲಕಿಯನ್ನು ಬೆತ್ತಲೆಗೊಳಿಸಿ ಚಿತ್ರ ಹಿಂಸೆ: ಐವರು ಯುವಕರ ಫೋಟೋ ರಿಲೀಸ್ ಮಾಡಿದ ಪೊಲೀಸರು
27/05/2021
ಅಸ್ಸಾಂ: ಬಾಲಕಿಯೋರ್ವಗಳನ್ನು ನಗ್ನಗೊಳಿಸಿ, ಥಳಿಸಿ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋಗೆ ಸಂಬಂಧಿಸಿದಂತೆ ಐವರು ಆರೋಪಿಗಳ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಈ ಘಟನೆ ನಡೆದದ್ದು ಎಲ್ಲಿ ಎಂಬ ಬಗ್ಗೆ ಸ್ಪಷ್ಟವಾದ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ, ಈ ವಿಡಿಯೋದಲ್ಲಿ ಐವರು ಯುವಕರು ಬಾಲಕಿಯೋರ್ವಗಳನ್ನು ನಗ್ನವಾಗಿ ಲೈಂಗಿಕ ಶೋಷಣೆ ಹಾಗೂ ಹಲ್ಲೆ ನಡೆಸುತ್ತಿರುವುದು ಸೆರೆಯಾಗಿದೆ.
ಘಟನೆ ಸಂಬಂಧ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಆರೋಪಿಗಳನ್ನು ಗುರುತಿಸುವಂತೆ ಆರೋಪಿಗಳ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ. ನಿಮ್ಮಲ್ಲಿ ಯಾರಿಗಾದರೂ ಈ ಆರೋಪಿಗಳ ಪರಿಚಯ ಇದ್ದರೆ ನಮನ್ನು ಸಂಪರ್ಕಿಸಿ ಎಂದು ಈ ವಿಡಿಯೋ ಸಂಬಂಧ ಕೇಂದ್ರ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.