ಅಪಘಾತದಲ್ಲಿ ಶಾಸಕರ ಪುತ್ರ ಸೇರಿದಂತೆ 7 ಮಂದಿ ಸಾವು | ಅಪಘಾತಕ್ಕೂ ಮೊದಲು ಎಚ್ಚರಿಕೆ ನೀಡಿದ್ದ ಪೊಲೀಸರು - Mahanayaka

ಅಪಘಾತದಲ್ಲಿ ಶಾಸಕರ ಪುತ್ರ ಸೇರಿದಂತೆ 7 ಮಂದಿ ಸಾವು | ಅಪಘಾತಕ್ಕೂ ಮೊದಲು ಎಚ್ಚರಿಕೆ ನೀಡಿದ್ದ ಪೊಲೀಸರು

hosur mla prakash son karunasagar
31/08/2021

ಬೆಂಗಳೂರು: ನಗರದ ಕೋರಮಂಗಲದಲ್ಲಿ ಕಳೆದ ಮಧ್ಯರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತಮಿಳುನಾಡು ಹೊಸೂರಿನ ಡಿಎಂಕೆ ಶಾಸಕ ವೈ.ಪ್ರಕಾಶ್ ಪುತ್ರ ಹಾಗೂ ಭಾವಿ ಸೊಸೆ ಸಹಿತ 7 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ಈ ದುರ್ಘಟನೆ ಸಂಭವಿಸಿದ್ದು, ಅತಿ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬಂದಿದ್ದೇ ದುರ್ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಕಾರಿನಲ್ಲಿ ನಾಲ್ವರು ಪುರುಷರು ಹಾಗೂ ಮೂವರು ಮಹಿಳೆಯರು ಇದ್ದರು. ಇವರೆಲ್ಲರೂ 20ರಿಂದ 30 ವರ್ಷದೊಳಗಿನವರು ಎಂದು ತಿಳಿದು ಬಂದಿದೆ. ಮೃತರನ್ನು ಶಾಸಕ ವೈ.ಪ್ರಕಾಶ್ ಪುತ್ರ ಕರುಣಾಸಾಗರ, ಬಿಂದು, ಇಶಿತಾ, ಡಾ ಧನುಶಾ, ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ ಎಂದು ಗುರುತಿಸಲಾಗಿದೆ.

ತನ್ನ ಪ್ರೇಯಸಿ ಹಾಗೂ ಸ್ನೇಹಿತರ ಜೊತೆಗೆ ಶಾಸಕರ ಪುತ್ರ ಕರುಣಾಸಾಗರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಇದೇ ಕಾರನ್ನು ಸುಮಾರು 11:50ರ ವೇಳೆಗೆ ಆಡುಗೋಡಿ ಪೊಲೀಸರು ತಪಾಸಣೆ ನಡೆಸಿದ್ದರು. ರಾತ್ರಿ ಕರ್ಫ್ಯೂ ಇದೆ, ಕಾರಿನಲ್ಲಿ ಸುತ್ತಾಡಬೇಡಿ ಎಂದು ಪೊಲೀಸರು ವಾರ್ನಿಂಗ್ ನೀಡಿದ್ದರು. ಈ ವೇಳೆ ತಾನು ಶಾಸಕರ ಪುತ್ರ ಎಂದು ಹೇಳಿದ್ದ  ಕರುಣಾಸಾಗರ್, ಪೊಲೀಸರ ಬಳಿಕ ಕ್ಷಮೆಯಾಚಿಸಿದ್ದ ಎಂದು ಹೇಳಲಾಗಿದೆ. ಇದಾದ ಎರಡು ಗಂಟೆಗಳ ಬಳಿಕ ಕೋರಮಂಗಲದಲ್ಲಿ ಇದೇ ಕಾರು ಅಪಘಾತಕ್ಕೀಡಾಗಿದೆ.

ಕೇವಲ 5 ಜನರು ಪ್ರಯಾಣಿಸಬಹುದಾಗಿದ್ದ ಕಾರಿನ ಮುಂದಿನ ಸೀಟ್ ನಲ್ಲಿ ಮೂವರು ಕುಳಿತಿದ್ದರು. ಹಿಂದಿನ ಸೀಟಿನಲ್ಲಿ ನಾಲ್ವರು ಕುಳಿತಿದ್ದರು. ಕಾರಿನಲ್ಲಿದ್ದ ಯಾರು ಕೂಡ ಸೀಟ್ ಬೆಲ್ಟ್ ಹಾಕಿರಲಿಲ್ಲ. ಹಾಗಾಗಿ ಅಪಘಾತ ಸಂಭವಿಸಿದ ವೇಳೆ ಕಾರಿನ ಏರ್ ಬಲೂನ್  ತೆರೆದುಕೊಂಡಿಲ್ಲ ಎಂದು ಹೇಳಲಾಗಿದೆ.

ಇನ್ನಷ್ಟು ಸುದ್ದಿಗಳು…

ವಿಪರೀತ ವೇಗದಿಂದ ಬಂದು ಕಾಂಪೌಂಡ್ ಗೆ ಡಿಕ್ಕಿ ಹೊಡೆದ ಕಾರು: 7 ಮಂದಿ ಬಲಿ

ಅಫ್ಘಾನಿಸ್ತಾನ ತೊರೆದ ಅಮೆರಿಕ ಸೇನೆ: ಆಗಸಕ್ಕೆ ಗುಂಡು ಹಾರಿಸಿ ಸಂಭ್ರಮಿಸಿದ ತಾಲಿಬಾನಿಗರು

ಏಳೆಂಟು ವರ್ಷದ ಪ್ರೀತಿ ನಡು ರಸ್ತೆಯಲ್ಲಿ ದುರಂತ ಅಂತ್ಯ! | ಪ್ರಿಯತಮೆಯ ಕತ್ತು ಸೀಳಿ, ತನ್ನ ಕತ್ತನ್ನೂ ಸೀಳಿಕೊಂಡ!

ಮಗುವಿಗೆ ಚಪ್ಪಲಿಯಲ್ಲಿ ಹೊಡೆದು ಚಿತ್ರ ಹಿಂಸೆ ನೀಡಿದ್ದ ತಾಯಿ ಅರೆಸ್ಟ್!

ಇತ್ತೀಚಿನ ಸುದ್ದಿ