ತನ್ನ ಹೊಸ ಕಚೇರಿ ಉದ್ಘಾಟನೆಗೆಂದು ಹೋಗುತ್ತಿದ್ದ ಯುವಕ ಅಪಘಾತದಲ್ಲಿ ಸಾವು! - Mahanayaka
2:39 PM Wednesday 5 - February 2025

ತನ್ನ ಹೊಸ ಕಚೇರಿ ಉದ್ಘಾಟನೆಗೆಂದು ಹೋಗುತ್ತಿದ್ದ ಯುವಕ ಅಪಘಾತದಲ್ಲಿ ಸಾವು!

bike
22/03/2021

ಬೆಳ್ತಂಗಡಿ:  ತನ್ನದೇ ಸ್ವಂತ ಕಚೇರಿ ಉದ್ಘಾಟನೆಗೆ ತೆರಳುತ್ತಿದ್ದ ಯುವಕನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಇಲ್ಲಿನ ಮಾಲಾಡಿ ಸಮೀಪ ಅರ್ಕುಲ ತಿರುವಿನಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಮದ್ದ ನಿವಾಸಿ 28 ವರ್ಷ ವಯಸ್ಸಿನ ಮಾಝಿನ್  ಮೃತಪಟ್ಟ ಯುವಕನಾಗಿದ್ದು,  ಸೋಮವಾರ  ಮದ್ದಡ್ಕದಲ್ಲಿ ತನ್ನ ಹೊಸ ಕಚೇರಿ ಆರಂಭಿಸಲು ಅವರು ಹೊರಟಿದ್ದರು. ಇದೇ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

ಮಾಲಾಡಿ ಬಳಿ ಅರ್ತಿಲ ತಿರುವಿನಲ್ಲಿ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ಹೇಳಲಾಗಿದೆ. ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಮಾಝಿನ್  ಅವರನ್ನು ತಕ್ಷಣವೇ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ