ಅಪರೂಪದ ಬರ್ಕ ಜಿಂಕೆ ಬೇಟೆ: ಹಾಸನದಲ್ಲಿ ಮೂವರ ಬಂಧನ
ಹಾಸನ: ಅಪರೂಪದ ಬರ್ಕ ಜಿಂಕೆ ಬೇಟೆಯಾಡಿದ್ದ ಮೂವರು ಬೇಟೆಗಾರರನ್ನು ಯಸಳೂರು ಪ್ರಾದೇಶಿಕ ಅರಣ್ಯ ವಲಯದ ಸಿಬ್ಬಂದಿ ಬಂಧಿಸಿದ್ದಾರೆ.
ಅತ್ತಿಹಳ್ಳಿ ಗ್ರಾಮದ ಧರ್ಮೇಗೌಡ, ಯಾಚೀನಮನೆ ಗ್ರಾಮದ ಸುಬ್ರಮಣ್ಯ, ಬೆಟ್ಟದಮನೆ ಗ್ರಾಮದ ಸುರೇಶ್ ಬಂಧಿತ ಆರೋಪಿಗಳು. ಆರೋಪಿಗಳು ಜಿಲ್ಲೆಯ ಸಕಲೇಶಪುರ ತಾಲೂಕಿನ ಅತ್ತಿಹಳ್ಳಿ ಗ್ರಾಮದಲ್ಲಿ ಬರ್ಕ ಜಿಂಕೆಯನ್ನು ಬಂದೂಕಿನಿಂದ ಭೇಟೆಯಾಡಿ ಕೊಟ್ಟಿಗೆಯಲ್ಲಿ ಮಾಂಸ ಕತ್ತರಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಬಂಧಿತರಿಂದ 9.5 ಕೆ.ಜಿ. ಮಾಂಸ, ಒಂದು ಬಂದೂಕು ಹಾಗೂ ಒಂದು ಕತ್ತಿಯನ್ನು ವಶಕ್ಕೆ ಪಡೆದಿದ್ದಾರೆ. ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಚೂರಿಯೊಂದಿಗೆ ಮಸೀದಿಗೆ ನುಗ್ಗಲು ಯತ್ನ: ಆರೋಪಿ ವಶಕ್ಕೆ
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಯ ಬಂಧನ
ಯುದ್ದಪೀಡಿತ ರಷ್ಯಾ ವಿರುದ್ಧ ಸಂಘರ್ಷಕ್ಕೆ ಇಳಿಯುವುದಿಲ್ಲ: ಜೋ ಬೈಡನ್
ಉಕ್ರೇನ್ ಮೇಲೆ ರಷ್ಯಾ ದಾಳಿ: ಕನ್ನಡಿಗ ನವೀನ್ ಮೃತದೇಹ ಪತ್ತೆ
ಭೀಕರ ಅಪಘಾತ; ತಂದೆ -ಮಗಳು ಸ್ಥಳದಲ್ಲೇ ಸಾವು