ಅಪೌಷ್ಟಿಕತೆ ನಿರ್ಮೂಲನೆ ಪೌಷ್ಟಿಕಾಂಶ ಮಾಸಾಚರಣೆ ಅಭಿಯಾನದ ಮುಖ್ಯ ಗುರಿ | ಲಾಲಸಾಬ್ ಪೀರಾಪುರ
ಕೆಂಭಾವಿ: ಪೌಷ್ಟಿಕಾಂಶ ಮಾಸಾಚರಣೆ ಅಭಿಯಾನದ ಮುಖ್ಯ ಗುರಿ ಅಪೌಷ್ಟಿಕತೆ ನಿರ್ಮೂಲನೆ ಮಾಡುವುದಾಗಿದೆ ಎಂದು ಸುರಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಾಲಸಾಬ್ ಪೀರಾಪುರ ಹೇಳಿದರು.
ಮಾಲಗತ್ತಿಯಲ್ಲಿ ಹಮ್ಮಿಕೊಂಡಿದ್ದ ನಗನೂರು ವಲಯ ಮಟ್ಟದ ಪೌಷ್ಟಿಕಾಂಶ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೌಷ್ಟಿಕಾಂಶ ಭರಿತ ಹಣ್ಣುಗಳು, ತರಕಾರಿಗಳ ಸೇವನೆಯಿಂದ ಗರ್ಭಿಣಿ-ಬಾಣಂತಿಯರ ಆರೋಗ್ಯ ಸ್ಥಿತಿಯನ್ನು ಸುಧಾರಿಸಬಹುದು ಹಾಗೂ ಮುಂದೆ ಜನಿಸುವ ಶಿಶುಗಳು ಸಹ ಸದೃಢವಾಗಿರಲು ಸಾಧ್ಯ. ಸ್ಥಳಾವಕಾಶ ಇರುವ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಗರ್ಭಿಣಿ-ಬಾಣಂತಿ ಮನೆಗಳ ಹತ್ತಿರ ಪೌಷ್ಟಿಕ ಕೈತೋಟ ನಿರ್ಮಾಣ ಮಾಡಲು ತಿಳಿವಳಿಕೆ ನೀಡಿ ಅಪೌಷ್ಟಿಕತೆ ನಿರ್ಮೂಲನೆ ಮಾಡಬೇಕು ಎಂದು ತಿಳಿಸಿದರು.
ನಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಸುನಿಲ್ ಮಾತನಾಡಿ, ಮಗುವು ವಯಸ್ಸಿಗೆ ತಕ್ಕ ಎತ್ತರ ಹಾಗೂ ತೂಕ ಹೊಂದಿರಬೇಕು. ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಗುರುತಿಸಿ, ಚಿಕಿತ್ಸೆ ನೀಡಬೇಕು. ಪ್ರತಿ ಪಂಚಾಯಿತಿ ಮಟ್ಟದಲ್ಲಿ ವಿಶೇಷ ಪೋಷಣೆ ಸಭೆಗಳನ್ನು ಆಯೋಜಿಸಬೇಕು. ತೀವ್ರ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅಂಥ ಮಕ್ಕಳಿಗೆ ಇಲಾಖೆಯಿಂದ ಸಿಗುವ ಎಲ್ಲಾ ಸೌಲಭ್ಯಗಳ ಜೊತೆ ಎನ್ ಆರ್ ಸಿ ಕೇಂದ್ರಕ್ಕೆ ದಾಖಲು ಮಾಡಿ ಆರೋಗ್ಯ ಸೇವೆ ನೀಡಲು ಎಲ್ಲಾ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಕ್ರಮ ವಹಿಸಬೇಕು ಎಂದರು.
ಗ್ರಾ.ಪಂ.ಉಪಾಧ್ಯಕ್ಷ ನಿಂಗಣ್ಣ ಸಾಹುಕಾರ, ಬಸವರಾಜ ಮಲ್ಲೆ , ವಿಎಸ್ ಎಸ್ ಎನ್ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ದೊರೆ, ಗ್ರಾಮ ಲೆಕ್ಕಾಧಿಕಾರಿ ಸಂತೋಷ ರಾಠೋಡ್, ಅಬ್ದುಲ್ ಲತೀಫ್ ಅಂಗನವಾಡಿ ಮೇಲ್ವೀಚಾರಕೀಯರಾದ ಶಶಿಕಲಾ ಘಾಳೆ, ಸಾವಿತ್ರಿ ಘಾಳೆ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಸ್ವಇಚ್ಛೆಯಿಂದ ಮಾತ್ರ ಮತಾಂತರವಾಗಲು ಕಾನೂನಿನಲ್ಲಿ ಅವಕಾಶವಿದೆ | ಸಿಎಂ ಬಸವರಾಜ ಬೊಮ್ಮಾಯಿ
ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಅನೈತಿಕ ಗೂಂಡಾಗಿರಿ: ಕಠಿಣ ಕಾನೂನು ಕ್ರಮಕ್ಕೆ ಡಿವೈಎಫ್ ಐ ಒತ್ತಾಯ
ಕೃಷಿ ಸಚಿವ ಬಿ.ಸಿ.ಪಾಟೀಲ್, ಸಚಿವೆ ಜೊಲ್ಲೆ ವಿರುದ್ಧ ತಿರುಗಿ ಬಿದ್ದ ಗೋಮಾತೆ | ಸಚಿವರಿಗೆ ತಿವಿಯಲು ಯತ್ನ
ಆರೆಸ್ಸೆಸ್ ನದ್ದು ತಾಲಿಬಾನ್ ಸಂಸ್ಕೃತಿ, ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ | ಸಿದ್ದರಾಮಯ್ಯ ವಾಗ್ದಾಳಿ
ಗೋಶಾಲೆ ನಿರ್ಮಾಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 98 ಎಕರೆ ಪ್ರದೇಶಕ್ಕೆ ಗುರುತು | ಸಚಿವ ಎಸ್.ಅಂಗಾರ
ಬಿಜೆಪಿಯ ಅಧಿಕಾರವಧಿಯಲ್ಲಿ ಹಿಂದುತ್ವ ಅಪಾಯದ ಸ್ಥಿತಿಯಲ್ಲಿದೆ | ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ