ನೂತನ ಉಸ್ತುವಾರಿ ಸಚಿವರ ನೇಮಕ: ಯಾರಿಗೆ ಯಾವ ಜಿಲ್ಲೆ? | ಇಲ್ಲಿದೆ ವಿವರ
ಬೆಂಗಳೂರು : ಸಿಎಂ ಸಿದ್ದರಾಮಯ್ಯಗೆ ಭಾರೀ ತಲೆನೋವು ತಂದಿದ್ದ ಜಿಲ್ಲಾ ಉಸ್ತುವಾರಿ ನೇಮಕ ಪ್ರಕ್ರಿಯೆ ಕೊನೆಗೂ ಪೂರ್ಣಗೊಂಡಿದೆ. ಅಳೆದು ತೂಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಇಂದು ಸುತ್ತೋಲೆ ಹೊರಡಿಸಿದೆ.
ಭಾನುವಾರ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಉದ್ಘಾಟನೆಗೊಳ್ಳಲಿದೆ. ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರುಗಳು ಜಿಲ್ಲಾ ಕೇಂದ್ರಗಳಲ್ಲಿ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಉಸ್ತುವಾರಿ ಪಟ್ಟಿಯನ್ನು ಪ್ರಕಟಿಸಲಾಗಿದೆ.ಇಬ್ಬರು ಸಚಿವರು ಇರುವ ತುಮಕೂರು, ಕಲಬುರಗಿ, ಮೈಸೂರು, ಬೀದರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿನ ವಿವಾದಗಳನ್ನು ಸುಲಭವಾಗಿ ಬಗೆಹರಿಸಲಾಗಿದೆ.
ಡಿ.ಕೆ.ಶಿವಕುಮಾರ್: ಬೆಂಗಳೂರು ನಗರ
ಡಾ.ಜಿ.ಪರಮೇಶ್ವರ್: ತುಮಕೂರು
ಎಚ್.ಕೆ.ಪಾಟೀಲ: ಗದಗ
ಕೆ.ಹೆಚ್.ಮುನಿಯಪ್ಪ: ಬೆಂಗಳೂರು ಗ್ರಾಮಾಂತರ
ರಾಮಲಿಂಗರೆಡ್ಡಿ: ರಾಮನಗರ
ಕೆ.ಜೆ.ಜಾರ್ಜ್: ಚಿಕ್ಕಮಗಳೂರು
ಎಂ.ಬಿ.ಪಾಟೀಲ: ವಿಜಯಪುರ
ದಿನೇಶ್ ಗುಂಡೂರಾವ್: ದಕ್ಷಿಣ ಕನ್ನಡ
ಹೆಚ್.ಸಿ.ಮಹಾದೇವಪ್ಪ: ಮೈಸೂರು
ಸತೀಶ್ ಜಾರಕಿಹೊಳಿ: ಬೆಳಗಾವಿ
ಪ್ರಿಯಾಂಕ್ ಖರ್ಗೆ: ಕಲಬುರಗಿ
ಶಿವಾನಂದ ಪಾಟೀಲ: ಹಾವೇರಿ
ಬಿ.ಝೆಡ್.ಜಮೀರ್ ಅಹ್ಮದ್ ಖಾನ್: ವಿಜಯನಗರ
ಶರಣ ಬಸಪ್ಪ ದರ್ಶನಾಪುರ್: ಯಾದಗಿರಿ
ಈಶ್ವರ್ ಬಿ. ಖಂಡ್ರೆ: ಬೀದರ್
ಎನ್.ಚಲುವರಾಯಸ್ವಾಮಿ: ಮಂಡ್ಯ
ಎಸ್.ಎಸ್.ಮಲ್ಲಿಕಾರ್ಜುನ: ದಾವಣಗೆರೆ
ಸಂತೋಷ ಎಸ್.ಲಾಡ್: ಧಾರವಾಡ
ಡಾ.ಶರಣ ಪ್ರಕಾಶ್ ಪಾಟೀಲ್: ರಾಯಚೂರು
ಆರ್.ಬಿ.ತಿಮ್ಮಾಪೂರ: ಬಾಗಲಕೋಟೆ
ಕೆ.ವೆಂಕಟೇಶ್: ಚಾಮರಾಜನಗರ
ತಂಗಡಗಿ ಶಿವರಾಜ್ ಸಂಗಪ್ಪ: ಕೊಪ್ಪಳ
ಡಿ.ಸುಧಾಕರ್: ಚಿತ್ರದುರ್ಗ
ಬಿ.ನಾಗೇಂದ್ರ: ಬಳ್ಳಾರಿ
ಕೆ.ಎನ್.ರಾಜಣ್ಣ: ಹಾಸನ
ಬಿ.ಎಸ್.ಸುರೇಶ್: ಕೋಲಾರ
ಲಕ್ಷ್ಮೀ ಹೆಬ್ಬಾಳ್ಕರ್: ಉಡುಪಿ
ಮಂಕಾಳ್ ವೈದ್ಯ: ಉತ್ತರ ಕನ್ನಡ
ಮಧುಬಂಗಾರಪ್ಪ: ಶಿವಮೊಗ್ಗ
ಡಾ.ಎಂ.ಸಿ.ಸುಧಾಕರ್: ಚಿಕ್ಕಬಳ್ಳಾಪುರ
ಎನ್.ಎಸ್.ಭೋಸರಾಜು: ಕೊಡಗು
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw