ಅಪ್ಪು ಸಮಾಧಿ ಅದ್ಬುತ ಸ್ಮಾರಕ ಮಾಡಲಾಗುವುದು |  ಅಂಬರೀಶ್ ಸ್ಮಾರಕ  ಕಾರ್ಯ ಪೂರ್ಣ: ಸಿಎಂ ಬೊಮ್ಮಾಯಿ - Mahanayaka

ಅಪ್ಪು ಸಮಾಧಿ ಅದ್ಬುತ ಸ್ಮಾರಕ ಮಾಡಲಾಗುವುದು |  ಅಂಬರೀಶ್ ಸ್ಮಾರಕ  ಕಾರ್ಯ ಪೂರ್ಣ: ಸಿಎಂ ಬೊಮ್ಮಾಯಿ

ambarish puneeth
08/02/2023

ಬೆಂಗಳೂರು: ದಿವಂಗತ ಪುನೀತ್ ರಾಜಕುಮಾರ್ ಅವರ ಸಮಾಧಿಯನ್ನು ಅದ್ಬುತ‌ ಸ್ಮಾರಕ ಮಾಡಲಾಗುವುದು.  ಅಂಬರೀಶ್ ಸ್ಮಾರಕ  ಕಾರ್ಯ ಪೂರ್ಣಗೊಂಡಿದ್ದು, ಮಾರ್ಚ್ ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.


Provided by

ಬೆಂಗಳೂರಿನ ಪದ್ಮನಾಭನಗರದ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ರಿಂಗ್ ರಸ್ತೆಗೆ ಡಾ. ಪುನೀತ್ ರಾಜಕುಮಾರ ರಸ್ತೆ ಎಂದು ನಾಮಕರಣ ಮಾಡಿ ನಂತರ  ಬಾನ ದಾರಿಯಲ್ಲಿ ಪುನೀತ್ ಪಯಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಂದಾಯ ಸಚಿವ ಆರ್ ಅಶೋಕ್ ಒಬ್ಬ ಛಲಗಾರ, ಅವರು ಏನು ಅಂದುಕೊಳ್ಳುತ್ತಾರೆ ಅದನ್ನು ಮಾಡುತ್ತಾರೆ. ಪ್ರತಿಯೊಂದು ವಾರ್ಡ್ ಅಭಿವೃದ್ಧಿ ಮಾಡಿದ್ದಾರೆ. ಉದ್ಯಾನವನ, ಶಾಲೆ, ಆಸ್ಪತ್ರೆ ಗಳ ಉದ್ಘಾಟನೆ ಮಾಡಿದ್ದಾರೆ. ಎರಡು ಉದ್ಯಾನವನಗಳು ಕಸದ ತೊಟ್ಟಿಯಾಗಿತ್ತು ಅದನ್ನು ಅಭಿವೃದ್ದಿ ಪಡಿಸಿದ್ದಾರೆ. ರಿಂಗ್ ರಸ್ತೆಗೆ ಅಪ್ಪು ಹೆಸರು ಇಟ್ಟಿದ್ದಾರೆ. ಅವರ ಹೆಸರನ್ನು ಚಿರಸ್ಥಾಯಿಯಾಗಿಸಿದ್ದಾರೆ ಎಂದರು.

ಬೆಂಗಳೂರು ಒಂದು ಅಭಿವೃದ್ದಿ ಪರ ನಗರ, ಇದರ ಬ್ರಾಂಡ್ ನೇಮ್ ಉಳಿಸಬೇಕು. ಕೆಲವರು ಇದರ ಹೆಸರು ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ವಿಶ್ವ ಖ್ಯಾತಿ ಪಡೆದ ಆರ್ ಆಂಡ್ ಡಿ ಕೇಂದ್ರಗಳಿವೆ. ಪ್ರತಿ ದಿನ ಐದು ಸಾವಿರ ತಜ್ಞರು ಈ ನಗರಕ್ಕೆ ಬರುತ್ತಾರೆ. ಈ ನಗರದ ಅಭಿವೃದ್ದಿಗೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ನಗರದ ಎಲ್ಲ ಕ್ಷೇತ್ರಗಳು ಅಭಿವೃದ್ಧಿ ಆಗಿವೆ. ಇದರ ಹೆಸರು ಕೆಡಿಸಲು ಕೆಲವರು ಪ್ರಯತ್ನ ನಡೆಸಿದ್ದಾರೆ ಎಂದರು.


Provided by

ಅಶೋಕ್ ಅವರು ಬೆಂಗಳೂರಿನಲ್ಕಿ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪದ್ಮನಾಭನಗರವನ್ನು ಬಹಳ ಪ್ರೀತಿ ಮಾಡುತ್ತಾರೆ.‌ ಇಲ್ಲಿನ ಅಭಿವೃದ್ಧಿ ಕೆಲಸವನ್ನು ತಾವೇ ಮುಂದೆ ನಿಂತು ನೋಡುತ್ತಿರುವುದು ಸಂತಸದ ವಿಷಯ. ಅಶೋಕ ಅವರು ಜನ ಉಪಯೋಗಿ ಶಾಸಕರು. ಅವರಿಗೆ ಈ ಕ್ಷೇತ್ರದ ಜನರು ಸದಾಕಾಲ ಆಶೀರ್ವಾದ ಮಾಡಬೇಕು ಎಂದು ಹೇಳಿದರು.

ಪುನೀತ್  ನಮ್ಮ ನಿಮ್ಮೆಲ್ಲರ ಅಪ್ಪು, ಅವನು ನನ್ನ ಅಪ್ಪು. ರಾಜಕುಮಾರ್ ಕುಟುಂಬದೊಂದಿಗೆ ಸುಮಾರು ನಾಲ್ಕು ದಶಕದ ಒಡನಾಟ, ಅತಿ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಅನೇಕ ಜನರು ಸಣ್ಣ ವಯಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಅವರಲ್ಲಿ ಅಪ್ಪು ಒಬ್ಬರು. ಅವರ ಅಂತಿಮ ದರ್ಶನಕ್ಕೆ ಲಕ್ಷಾಂತರ ಜನರು ಬಂದಾಗ ಎಲ್ಲರೂ ಕಣ್ಣೀರು ಹಾಕಿದ್ದು ನೊಡಿ ಅವರು ಎಷ್ಟು ಪ್ರೀತಿ ಗಳಿಸಿದ್ದರು ಎನ್ನುವುದು ತಿಳಿಯುತ್ತದೆ.

ಬೀದರ್ ನ ಔರಾದ,  ಚಾಮರಾಜನಗರ, ನಿಪ್ಪಾಣಿ ಎಲ್ಲ ಕಡೆ ಅಪ್ಪು ಬಗ್ಗೆ ಅದೆ ಪ್ರೀತಿ, ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳಿದ್ದಾರೆ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕಿರುವವನು ಸಾಧಕ. ಅಪ್ಪು ಸತ್ತ‌ ನಂತರವೂ ನಮ್ಮ ಜೊತೆಗೆ ಇದ್ದಾರೆ.  ಅಪ್ಪು ಹೆಸರಿನಲ್ಲಿ ಸಮಾಧಿಯಲ್ಲಿ ಅದ್ಬುತ ಸ್ಮಾರಕವನ್ನು ಮಾಡುತ್ತೆವೆ. ಈ ಭಾಗ್ಯ ನನ್ನದು. ಅಷ್ಟೇ ಅಲ್ಲ ಕರ್ನಾಟಕ ರತ್ನ ಕೊಡುವ ಭಾಗ್ಯವೂ ನನ್ನದಾಗಿತ್ತು ಎಂದರು.

ರೇಸ್ ಕೋರ್ಸ್‌ ರಸ್ತೆಗೆ ಅಂಬರೀಶ್ ಹೆಸರು:

ನನ್ನ ಆತ್ಮೀಯ ಸ್ನೇಹಿತ ಅಂಬರೀಶ್ ಅವರ ಹೆಸರನ್ನು ರೇಸ್‌ ಕೋರ್ಸ್ ರಸ್ತೆಗೆ ಇಡಲು ತೀರ್ಮಾನಿಸಿದ್ದೇನೆ.  ಅವನ ಜೊತೆ ವಾರದಲ್ಲಿ ಏಳೂ ದಿನ ಜೊತೆಗಿರುತ್ತಿದ್ದೆವು. ಅವನು ಕೊಡುಗೈ ದಾನಿ. ಅವನ ಸ್ಮಾರಕ ಮಾಡುವ ಸೌಭಾಗ್ಯ ನನ್ನದು ಎಂದರು.

ಅಂಬರೀಶ್ , ರಾಜಕುಮಾರ್, ವಿಷ್ಣುವರ್ಧನ, ಶಂಕರನಾಗ್ ಅಪ್ಪು ಇವರೆಲ್ಲ ನಮ್ಮನ್ನು ರಂಜಿಸಲು  ಬಂದಿದ್ದರು ಎನಿಸುತ್ತದೆ. ಜೊತೆಗೆ ನಮ್ಮೆಲ್ಲರಿಗೆ  ಪ್ರೀತಿ ಬಿಟ್ಟು ಹೋಗಿದ್ದಾರೆ‌ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಂದಾಯ ಸಚಿವರಾದ ಆರ್. ಅಶೋಕ್, ಸಂಸದ ತೇಜಸ್ವಿಸೂರ್ಯ, ಶಾಸಕರಾದ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ, ಉದಯ ಗರುಡಾಚಾರ್, ಎಂ.ಕೃಷ್ಣಪ್ಪ, ನಟ ರಾಘವೇಂದ್ರ ರಾಜಕುಮಾರ್, ಅಭಿಷೇಕ್ ಅಂಬರೀಶ್ ಹಾಗೂ ಮತ್ತಿತರ ಗಣ್ಯರು ಹಾಜರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ