ಅಪ್ರಾಪ್ತೆಯನ್ನು ಮದುವೆಯಾಗಲು ಆಧಾರ್ ಕಾರ್ಡ್ ಫೋರ್ಜರಿ ಮಾಡಿ ಜೈಲು ಪಾಲಾದ ಯುವಕ! - Mahanayaka

ಅಪ್ರಾಪ್ತೆಯನ್ನು ಮದುವೆಯಾಗಲು ಆಧಾರ್ ಕಾರ್ಡ್ ಫೋರ್ಜರಿ ಮಾಡಿ ಜೈಲು ಪಾಲಾದ ಯುವಕ!

marriage
16/07/2022

ಬೆಂಗಳೂರು: ಕಾನೂನು ಪ್ರಕಾರ ಮಹಿಳೆಯರ ಮದುವೆಯಾಗಬೇಕಾದರೆ 18 ವರ್ಷ ತುಂಬಿರಬೇಕು. ಆದರೆ ಇಲ್ಲೊಬ್ಬ ವ್ಯಕ್ತಿ ಅಪ್ರಾಪ್ತೆಯನ್ನು ಮದುವೆಯಾಗಲು ಆಧಾರ್ ಕಾರ್ಡನ್ನೇ ಫೋರ್ಜರಿ ಮಾಡಿದ ಸಿಕ್ಕಿಬಿದ್ದ ಘಟನೆ ನಗರದಲ್ಲಿ ನಡೆದಿದೆ.


Provided by

ಆರೋಪಿ ಮಧುಮಗ ಮನು ಸದ್ಯ ರಾಜಗೋಪಾಲನಗರ ಠಾಣಾ ಪೊಲೀಸರ ಅತಿಥಿಯಾಗಿದ್ದಾನೆ. ಆಧಾರ್ ಕಾರ್ಡ್ ಫೋರ್ಜರಿ ಮಾಡಿದ ವ್ಯಕ್ತಿಯ ಬಂಧನಕ್ಕೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

ಆರೋಪಿ ಮನು ಎಂಬಾತ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಲು ಮುಂದಾಗಿದ್ದಾನೆ. ಅದರಂತೆ ಯುವತಿಯ ಆಧಾರ್ ಕಾರ್ಡ್‌ನಲ್ಲಿ ಹುಟ್ಟಿದ ವರ್ಷವನ್ನು 2005 ಆಗಿದ್ದನ್ನು 2000 ಇಸವಿಗೆ ಬದಲಾಯಿಸಲಾಗಿದೆ. ಅಲ್ಲದೆ ಲಗ್ಗೆರೆ ಸಬ್ ರಿಜಿಸ್ಟ್ರಾರ್ ಆಫೀಸ್‌ ನಲ್ಲಿ ಮದುವೆಯಾಗಲು ದಾಖಲೆಗಳನ್ನು ನೀಡಿದ್ದನು.


Provided by

ಅದಾಗ್ಯೂ ಆಧಾರ್ ಕಾರ್ಡ್‌ನಲ್ಲಿ ಇಸವಿ ತಿದ್ದುಪಡಿ ಮಾಡಿವುದು ತಿಳಿದುಬಂದ ಹಿನ್ನೆಲೆ ರಾಜಗೋಪಾಲನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಯುವತಿಯ ಆಧಾರ್ ಕಾರ್ಡ್ ಅನ್ನು ಬದಲಿಸಿ ಕೊಟ್ಟವರ ಬಂಧನಕ್ಕೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ