ಎಪ್ರಿಲ್ ನಲ್ಲಿ KGF- Chapter-2 V/S ವಿಜಯ್ ನಟನೆಯ BEAST - Mahanayaka

ಎಪ್ರಿಲ್ ನಲ್ಲಿ KGF- Chapter-2 V/S ವಿಜಯ್ ನಟನೆಯ BEAST

kgf vs beast
22/03/2022

ವಿಜಯ್ ಅಭಿನಯದ ‘ ‘Beast’  ಏಪ್ರಿಲ್ 13ರಂದು ಬಿಡುಗಡೆಯಾಗಲಿದ್ದು, ಚಿತ್ರ ಬಿಡುಡೆ  ದಿನಾಂಕವನ್ನು ಚಿತ್ರದ ನಿರ್ಮಾಪಕರು ಘೋಷಿಸಿದ್ದಾರೆ.

‘BEAST’ ಚಿತ್ರದ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ   ಬಿಡುಗಡೆ ದಿನಾಂಕವನ್ನು ಚಿತ್ರತಂಡ  ಘೋಷಣೆ ಮಾಡಿದೆ. ಈ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಯು/ಎ   ಪ್ರಮಾಣ ಪತ್ರ ನೀಡಿದೆ .

‘BEAST’ ಬಿಡುಗಡೆಯ ದಿನಾಂಕವನ್ನು ಘೋಷಿಸುವುದರೊಂದಿಗೆ, ‘ಕೆಜಿಎಫ್: 2’ ನೊಂದಿಗೆ ಭಾರಿ ಬಾಕ್ಸ್ ಆಫೀಸ್ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗಿದೆ.  ಯಶ್ ಅಭಿನಯದ ಚಿತ್ರವು ಏಪ್ರಿಲ್ 14 ರಂದು ತೆರೆಗೆ ಬರಲಿದೆ. ಎರಡೂ ಚಿತ್ರಗಳು ಭಾರೀ ಪೂರ್ವ-ಬಿಡುಗಡೆ ಹೈಪ್ ಅನ್ನು ಹೊಂದಿವೆ ಮತ್ತು ಇವೆರಡರಲ್ಲಿ ಯಾರು ವಿಜೇತರಾಗಿ ಹೊರಹೊಮ್ಮುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

ನೆಲ್ಸನ್ ದಿಲೀಪ್‌ಕುಮಾರ್ ಬರೆದು ನಿರ್ದೇಶಿಸಿದ ‘BEAST’, ಅದ್ದೂರಿ ಕಮರ್ಷಿಯಲ್ ಚಿತ್ರವಾಗಿದ್ದು, ಕಾಮಿಡಿ  ಆಕ್ಷನ್ ಎಂಟರ್‌ ಟೈನರ್ ಎಂದು ಹೇಳಲಾಗಿದೆ.

ತಾರಾಗಣದಲ್ಲಿ ಪೂಜಾ ಹೆಗ್ಡೆ  ಮತ್ತು ಖ್ಯಾತ ಚಲನಚಿತ್ರ ನಿರ್ಮಾಪಕ ಸೆಲ್ವರಾಘವನ್ ಮತ್ತೊಂದು ಪ್ರಮುಖ ಪಾತ್ರದಲ್ಲಿದ್ದಾರೆ.  ಮಲಯಾಳಂ ನಟ ಶೈನ್ ಟಾಮ್ ಚಾಕೊ, ಅಪರ್ಣಾ ದಾಸ್, ಅಂಕುರ್ ಅಜಿತ್ ವಿಕಲ್, ವಿಟಿವಿ ಗಣೇಶ್, ಯೋಗಿ ಬಾಬು, ರೆಡಿನ್ ಕಿಂಗ್ಸ್ಲಿ ಮತ್ತು ಲಿಲಿಪುಟ್ ಫರೂಕಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಾಳೆ ಪೊಸರುಗುಡ್ಡೆ ಮಿಯ್ಯಾರು ಶ್ರೀ ಸತ್ಯಸಾರಮಾನಿ ದೈವಸ್ಥಾನದ ವಾರ್ಷಿಕ ನೇಮೋತ್ಸವ

ಹಿಜಾಬ್ ತೀರ್ಪು: ಬಂದ್ ಕರೆ ನೀಡಿದವರ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಲು ಅರ್ಜಿ ಸಲ್ಲಿಕೆ

ಆಘಾತಕಾರಿ ಘಟನೆ: 2 ತಿಂಗಳ ಹೆಣ್ಣು ಮಗುವನ್ನು ಕೊಲೆಗೈದು ಒಲೆಗೆಸೆದ ತಾಯಿ

ಮತ್ತೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 50 ರೂ. ಏರಿಕೆ

ಬಿಗ್‌ ಶಾಕ್‌: ಭಾರೀ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ

ಇತ್ತೀಚಿನ ಸುದ್ದಿ