ಏಪ್ರಿಲ್‌ ಒಳಗೆ ತಾ.ಪಂ., ಜಿ.ಪಂ. ಚುನಾವಣೆ: ಸಚಿವ ಈಶ್ವರಪ್ಪ - Mahanayaka
3:23 PM Wednesday 5 - February 2025

ಏಪ್ರಿಲ್‌ ಒಳಗೆ ತಾ.ಪಂ., ಜಿ.ಪಂ. ಚುನಾವಣೆ: ಸಚಿವ ಈಶ್ವರಪ್ಪ

eswarappa
31/01/2022

ಶಿವಮೊಗ್ಗ: ಮಾರ್ಚ್‌ ಇಲ್ಲವೇ ಏಪ್ರಿಲ್‌ ಒಳಗೆ ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌ ಚುನಾವಣೆ ನಡೆಸಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌ ಚುನಾವಣೆ ನಡೆಸಬೇಕು ಎಂದು ಈ ಹಿಂದೆಯೇ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿತ್ತು.
ಆಯೋಗವೂ ದಿನಾಂಕ ನಿಗದಿ ಮಾಡಿತ್ತು. ಆದರೆ, ಚುನಾವಣೆ ನಡೆಸುವ ಬಗ್ಗೆ ಆಕ್ಷೇಪಣಾ ಅರ್ಜಿಗಳು ಬಂದ ನಂತರ ಚುನಾವಣೆಯನ್ನು ಮುಂದೂಡಲಾಗಿತ್ತು. ಲಕ್ಷ್ಮಿನಾರಾಯಣ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ವರದಿ ಬಂದ ಕೂಡಲೇ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

 ಮುಂದಿನ ಮುಖ್ಯಮಂತ್ರಿ ಯು.ಟಿ.ಖಾದರ್: ವಿಪಕ್ಷ ಉಪನಾಯಕನಾಗುತ್ತಿದ್ದಂತೆಯೇ ಹೊಸ ಚರ್ಚೆ

ಹ್ಯಾಂಡ್‌ ಬಾಲ್‌ ಕೋಚ್‌ ಮಾದಪ್ಪ ಆತ್ಮಹತ್ಯೆ

ಬಾಲಕಿಗೆ ತಾಳಿ ಕಟ್ಟಿ ಸಂಸಾರ ನಡೆಸಿದ ಯುವಕನ ಬಂಧನ

60 ಅಂತಸ್ತಿನ ಕಟ್ಟಡದಿಂದ ಬಿದ್ದ ಮಿಸ್ ಯು ಎಸ್ ಎ

ದುರಹಂಕಾರಿ ಸಚಿವರನ್ನು ಕೈಬಿಡಿ: ಎಂ.ಪಿ.ರೇಣುಕಾಚಾರ್ಯ 

 

ಇತ್ತೀಚಿನ ಸುದ್ದಿ