ಸ್ವಲ್ಪದರಲ್ಲೇ ಬಚಾವ್ ಆದ ಎ.ಆರ್.ರೆಹಮಾನ್ ಅವರ ಪುತ್ರ: ಒಂದು ನಿಮಿಷ ತಡವಾಗಿದ್ರೆ ಆಗುತ್ತಿತ್ತು ಅನಾಹುತ
ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಅವರ ಪುತ್ರ ಎ.ಆರ್.ಅಮೀನ್ ಅವರು ಸಂಗೀತ ಪ್ರದರ್ಶನದ ವೇಳೆ ನಡೆದ ಭೀಕರ ಘಟನೆಯಿಂದ ಸ್ವಲ್ಪದರಲ್ಲೇ ಪಾರಾದ ಘಟನೆ ನಡೆದಿದೆ.
ಕೆಲವು ದಿನಗಳ ಹಿಂದೆ ಸೆಟ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವೇದಿಕೆಯಲ್ಲಿ ಹಾಕಲಾಗಿದ್ದ ಬೃಹತ್ ಲೈಟ್ ಗೊಂಚಲು ಆಕಸ್ಮಿಕವಾಗಿ ಕೆಳಗೆ ಬಿದ್ದಿವೆ. ಈ ವೇಳೆ ವೇದಿಕೆಯಲ್ಲಿದ್ದ ಎ.ಆರ್.ಅಮೀನ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ತನಗೆ ಯಾವುದೇ ಹಾನಿಯಾಗದಿದ್ದರೂ, ಮೂರು ದಿನಗಳ ನಂತರವೂ ಆಘಾತಕ್ಕೊಳಗಾಗಿದ್ದೇನೆ ಎಂದು ಎ.ಆರ್.ಅಮೀನ್ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೆಲವು ನಿಮಿಷಗಳಲ್ಲಿಯೇ ಬೃಹತ್ ಲೈಟ್ಸ್ ಗಳ ಗೊಂಚಲುಗಳು ಕೆಳಗೆ ಬಿದ್ದವು, ಒಂದು ವೇಳೆ ತಾನು ಲೈಟ್ಸ್ ಬಿದ್ದ ಸ್ಥಳದಲ್ಲಿರುತ್ತಿದ್ದರೆ, ನನ್ನ ತಲೆಯ ಮೇಲೆ ಬೀಳುತ್ತಿತ್ತು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw