ಎರಡನೇ ಏಕದಿನ ಪಂದ್ಯ: ಭಾರತಕ್ಕೆ ಸೋಲು - Mahanayaka
1:17 PM Thursday 12 - December 2024

ಎರಡನೇ ಏಕದಿನ ಪಂದ್ಯ: ಭಾರತಕ್ಕೆ ಸೋಲು

saind
22/01/2022

ನವದೆಹಲಿ: ಬೋಲ್ಯಾಂಡ್ ಪಾರ್ಕ್‌ ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಸೋಲನ್ನು ಅನುಭವಿಸುವ ಮೂಲಕ ಮುಖಭಂಗ ಅನುಭವಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ರಿಷಬ್ ಪಂತ್ 85, ಹಾಗೂ ಕೆ.ಎಲ್.ರಾಹುಲ್  55 ಅವರ ಅರ್ಧಶತಕದ ನೆರವಿನಿಂದಾಗಿ ಆರು ವಿಕೆಟ್ ನಷ್ಟಕ್ಕೆ 287 ರನ್‌ ಗಳಿಸಿತು.

288 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಜನ್ನೆಮನ್ ಮಾಲನ್ ಅವರ 91 ಹಾಗೂ ಕ್ವಿಂಟನ್ ಡಿಕಾಕ್ ಅವರ 78 ರನ್‌ಗಳ ನೆರವಿನಿಂದಾಗಿ ಕೇವಲ ಮೂರು ವಿಕೆಟ್ ಗಳ ನಷ್ಟಕ್ಕೆ ಇನ್ನೂ 11 ಎಸೆತಗಳು ಬಾಕಿ ಇರುವಂತೆ ಗೆಲುವನ್ನು ಸಾಧಿಸಿತು. ಡಿಕಾಕ್ ಮತ್ತು ಮಾಲನ್ ಅವರ ಮೊದಲ ವಿಕೆಟ್‌ಗೆ 132 ರನ್‌ಗಳ ಜೊತೆಯಾಟದಿಂದಾಗಿ ತಂಡ ಉತ್ತಮ ಆರಂಭವನ್ನು ಕಂಡಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಿಎಂ ಹತ್ಯೆ ಮಾಡುವುದಾಗಿ ಬೆದರಿಕೆ: ನಟ ಪವನ್ ಕಲ್ಯಾಣ್ ಅಭಿಮಾನಿ ಬಂಧನ

ಜ. 23ರಂದು ಸಂಪೂರ್ಣ ಲಾಕ್‌ ಡೌನ್ ; ಸಿಎಂ ಸ್ಟಾಲಿನ್

20 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ: 7 ಮಂದಿ ಸಜೀವ ದಹನ, 17ಕ್ಕೂ ಹೆಚ್ಚು ಮಂದಿಗೆ ಗಾಯ

ತಾಯಿ, ಮಗು ಸಾವಿಗೆ  ವೈದ್ಯರ ನಿರ್ಲವೇ ಕಾರಣ:  ಕುಟುಂಬಸ್ಥರಿಂದ ಆರೋಪ

ಹಿಟ್​ ಆಂಡ್​ ರನ್​; ವೃದ್ಧೆ ಸ್ಥಳದಲ್ಲೇ ಸಾವು

 

ಇತ್ತೀಚಿನ ಸುದ್ದಿ