ಬಿಜೆಪಿ ಎಸ್ ಸಿ ಮೋರ್ಚಾದ ಪ್ರ.ಕಾರ್ಯದರ್ಶಿಯಾಗಿ ಅರಕಲವಾಡಿ ಮಹದೇವಯ್ಯ ನೇಮಕ - Mahanayaka
7:25 AM Thursday 12 - December 2024

ಬಿಜೆಪಿ ಎಸ್ ಸಿ ಮೋರ್ಚಾದ ಪ್ರ.ಕಾರ್ಯದರ್ಶಿಯಾಗಿ ಅರಕಲವಾಡಿ ಮಹದೇವಯ್ಯ ನೇಮಕ

mahadevaya
09/12/2022

ಚಾಮರಾಜನಗರ: ಜಿಲ್ಲಾ ಬಿಜೆಪಿ ಎಸ್ ಸಿ.ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಅರಕಲವಾಡಿ ಮಹದೇವಯ್ಯ ನೇಮಕಗೊಂಡಿದ್ದಾರೆ.

ನಗರದ ಮೇಘಾ ಕಾಂಪ್ಲೆಕ್ಸ್ ನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ  ಅರಕಲವಾಡಿ ಮಹದೇವಯ್ಯ ಅವರಿಗೆ ಆದೇಶಪತ್ರ ವಿತರಿಸಲಾಯಿತು.

ಜಿಲ್ಲೆಯಲ್ಲಿ ದಲಿತ ಸಮುದಾಯವನ್ನು ಸಂಘಟನೆ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಯನ್ನು ಮನೆಮನೆಗೆ ತಿಳಿಸುವುದರ ಜೊತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದವರಿಗೆ ಮೀಸಲಾತಿ ಹೆಚ್ಚಳ ಮಾಡಿರುವುದನ್ನು ಸಮುದಾಯಕ್ಕೆ ತಿಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಪಕ್ಷ ಸಂಘಟನೆ ಮಾಡಬೇಕು. ಪಕ್ಷಕ್ಕೆ ಯಾವುದೇ ಚ್ಯುತಿಬಾರದ ರೀತಿ ಕಾರ್ಯನಿರ್ವಹಿಸಬೇಕು ಎಂದು ಆದೇಶಪತ್ರದಲ್ಲಿ ತಿಳಿಸಲಾಗಿದೆ.

ಬಿಜೆಪಿ ಎಸ್ ಸಿ ಮೋರ್ಚಾ ಉಪಾಧ್ಯಕ್ಷರು, ಮಾಜಿ ಶಾಸಕರಾದ ಜಿ.ಎನ್ ನಂಜುಂಡಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಸುಂದರ್,  ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಾರಾಯಣ ಪ್ರಸಾದ್ , ಮಂಗಲ ಶಿವಕುಮಾರ್ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕಿನಕಹಳ್ಳಿ ರಾಚಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೂಡ್ನಾಕೂಡು ಪ್ರಕಾಶ್ ಅಯ್ಯನಪುರ ಶಿವಕುಮಾರ್ , ವೆಂಕಟರಮಣಸ್ವಾಮಿ (ಪಾಪು), ಬಿಜೆಪಿ ಮುಖಂಡ  ಕೆರೆಹಳ್ಳಿ ಮಹದೇವಸ್ವಾಮಿ, ಎಪಿಎಂಸಿ ಸದಸ್ಯ ರವಿಕುಮಾರ್,  ಅರಕಲವಾಡಿ ಮಹೇಶ್, ಮಂಡಲ ಅಧ್ಗಕ್ಷ ರಾಜು  ಕಾರ್ಯದರ್ಶಿ ಆರ್.ಎನ್. ಶಿವಣ್ಣ, ಶಿವಕುಮಾರ್ ರಾಮಸಮುದ್ರ,  ಗ್ರಾ.ಪಂ.ಮಾಜಿ ಅಧ್ಯಕ್ಷ  ಹೆಚ್ .ಮೂರ್ತಿ ಮೂಡಹಳ್ಳಿ,  ಸಿ. ಚನ್ನಬಸವಯ್ಯ ಹಾಜರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ