ಹಾಸನ: ಅರಳಿದ ಕಮಲವನ್ನು ಕೆಡವಲು ಮುಂದಾದ ಪ್ರವೀಣ್ ಕುಮಾರ್ - Mahanayaka

ಹಾಸನ: ಅರಳಿದ ಕಮಲವನ್ನು ಕೆಡವಲು ಮುಂದಾದ ಪ್ರವೀಣ್ ಕುಮಾರ್

praveen kumar
13/07/2022

ಹೆಸರು ಪ್ರವೀಣ್ ಕುಮಾರ್ ಇಮೇಜ್ ಒರಿಜಿನಲ್, ಫೋಟೋ ಫಿನಿಷ್ ವೈಟ್ ಶೀಟ್ ಹಿಸ್ಟರಿ ಇನ್ ಜೆಡಿಎಸ್ ಬ್ಯುಟಿಫುಲ್ ಲಾಂಗ್ವೇಜ್ ಸ್ಕಿಲ್ ಟಾಕ್ ವಂಡರ್ ಫುಲ್ ಮೋರ್ ಹಾನೆಸ್ಟ್ ಮೋರ್ ಹಂಬಲ್ ಮೋರ್ ಸಿಂಪಲ್…

ಹೌದು. ಪ್ರವೀಣ್ ಕುಮಾರ್ ಅಂದರೆ ವ್ಯಕ್ತಿ ಅಪ್ಪಟ ಬಂಗಾರ ಅಂತ ಇಲ್ಲಿನ ಜನ ಹೇಳ್ತಾರೆ. ಪ್ರವೀಣ್ ಮೈಕ್ ಮುಂದೆ ನಿಂತಾಗ ಅವರನ್ನು ಯಾವ ಪರಿ ಸಂಘಟನಾ ಕೌಶಲ್ಯ ಆವರಿಸುತ್ತದೆ ಎಂದರೆ, ಕೇಳುಗರು ಬೆಕ್ಕಸ ಬೆರಗಾಗುವಂತೆ ಸುಲಿಲಿತವಾಗಿ ಸ್ಪಷ್ಟವಾಗಿ ಸಹಜ ಕನ್ನಡದಲ್ಲಿ ಅರಳು ಹುರಿದಂತೆ ಎಲ್ಲರಿಗೂ ಅರ್ಥವಾಗುವಂತೆ ಅಚ್ಚುಕಟ್ಟಾಗಿ ಏನೇನು ವಿಚಾರ ಮುಟ್ಟಿಸಬೇಕು ಅದನ್ನು ಅಚ್ಚಳಿಯದಂತೆ ಪ್ರಸ್ತುತಪಡಿಸುವ ಜಾಣ್ಮೆಯ ಕಲೆ ಇವರಿಗೆ ಸಿದ್ಧಿಸಿದೆ.

ಪ್ರವೀಣ್ ಅದ್ಭುತ ಭಾಷಣಕಾರ ಮಾತ್ರ ಅಲ್ಲ, ಒಬ್ಬ ಅತ್ಯುತ್ತಮ ಸಂಘಟನಾಕಾರನೂ ಹೌದು. ಅಪ್ಪಟ ಹೋರಾಟಗಾರನೂ ಕೂಡ ಹೌದು. ಹೇಗೆಂದರೆ ಕೇವಲ ಭಾಷಣಕ್ಕೆ ಸೀಮೀತವಾಗದೆ ಅವರೊಂದಿಗೆ ಮಾತಿಗೆ ಕುಳಿತರೆ ಎಂತಹವರನ್ನೂ ಪ್ರಾದೇಶಿಕ ಪಕ್ಷದತ್ತ ಒಲವು ಮೂಡುವಂತಹ ಸೆಳೆಯುವಂತಹ ದಿವ್ಯಶಕ್ತಿ ಅವರಲ್ಲಿ ಅಡಗಿದೆ. ಇನ್ನೊಬ್ಬರನ್ನು ಉತ್ತೇಜಿಸುವ ಬೆಳೆಸುವ ಪ್ರೋತ್ಸಾಹಿಸುವ ಅವರ ಗುಣ ಮೆಚ್ಚುವಂತಹದ್ದು. ಇವರು ನಿಸ್ವಾರ್ಥ ಮನಸ್ಥಿತಿಯ ಅಭೂತಪೂರ್ವ ನಾಯಕರ ಹೃದಯವಂತರಾಗಿದ್ದಾರೆ.

ತಾನೊಬ್ಬ ಬೆಳೆದರೆ ಸಾಲದು ಜೊತೆಗೆ ಬರುವವರನ್ನು ಬೆಳೆಸಬೇಕು ಅಪರಿಚಿತರನ್ನು ಜೆಡಿಎಸ್ ಪಕ್ಷದತ್ತ ಸೆಳೆದು, ಅವರನ್ನು ಬೆಳೆಸಬೇಕು ಎಂಬ ದೊಡ್ಡ ಗುಣ ಇರುವ ಇವರು ಇಂದಿಗೂ ಸಹ ಲಕ್ಷಾಂತರ ಜೆಡಿಎಸ್ ಕಾರ್ಯಕರ್ತರ ಪಾಲಿಗೆ ಒಬ್ಬ ಅದ್ವಿತೀಯ ಸಲಹೆಗಾರನಾಗಲೂ ಅರ್ಹರು.

ಕೈಹಿಡಿದು ಮೇಲೆತ್ತುವ ತಿದ್ದಿ ಮುನ್ನೆಡೆಸುವ ಸರಿ ದಾರಿಯಲ್ಲಿ ಕರೆದುಕೊಂಡು ಹೋಗುವ ಜವಾಬ್ದಾರಿ ಇವರಿಗೆ ಜೆಡಿಎಸ್ ನೀಡಿದರೆ, ಎಷ್ಟೋ ಜೆಡಿಎಸ್ ಯುವಸಾರಥಿಗಳಿಗೆ ಸ್ಪೂರ್ತಿ ತುಂಬಿ ಅವರನ್ನು ಗುರುತಿಸಿ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡಿಸುವಷ್ಟು ಶಕ್ತಿ ಚೈತನ್ಯ ತಾಳ್ಮೆ ಹುಮ್ಮಸ್ಸು ಸಿಗಲಿದೆ ಅಂತ ಇಲ್ಲಿನ ಜನ ಹೇಳುತ್ತಾರೆ.

ಜೆಡಿಎಸ್ ವರಿಷ್ಠರು ದಿನಂಪ್ರತಿ ಇವತ್ತಿನಿಂದ ಹುಡುಕಲು ಶುರು ಮಾಡಿದರೂ ಪ್ರವೀಣ್ ರಂತಹ ನಿಷ್ಕಲ್ಮಶ ನಿಷ್ಠಾವಂತ ಪ್ರತಿಫಲಾಪೇಕ್ಷೆಯಿಲ್ಲದ ನಾಯಕರು ಜಿಲ್ಲೆಗೆ ಕನಿಷ್ಠ ಇಪ್ಪತ್ತು ಜನ ಸಿಗುತ್ತಾರೆ. ಆದರೆ ನೀವು ಎಷ್ಟೇ ಹುಡುಕಿದರೂ ಅತ್ಯುತ್ಸಾಹದಿಂದ ಸದಾ ಪಕ್ಷಕ್ಕಾಗಿ ಟೊಂಕಕಟ್ಟಿ ನಿಲ್ಲುವ 24/7 ಲಭ್ಯವಿರುವ ಪ್ರವೀಣ್ ರಂತಹ
ಕರ್ನಾಟಕದಲ್ಲಿ ನಿಮಗೆ ಇವರೊಬ್ಬರೇ ಸಿಗುವುದು ಅಂತಾರೆ ಕಾರ್ಯಕರ್ತರು.

ಪ್ರಜ್ವಲ್ ರೇವಣ್ಣ ಜೊತೆಗೆ ಪ್ರವೀಣ್ ಕುಮಾರ್

ಇನ್ನಾದರೂ ಜೆಡಿಎಸ್ ಚುನಾವಣಾ ಹತ್ತಿರ ಬರುತ್ತಿರುವ ಈ ಸಂದಿಗ್ಧ ಕಾಲದಲ್ಲಿ ಸಕಾರಾತ್ಮಕವಾಗಿ ಚಿಂತಿಸಿ ಅತ್ಯುತ್ತಮ ದರ್ಜೆಯ ಪ್ರವೀಣ್ ಕುಮಾರ್ ಅವರಂತಹ
ಪ್ರಾಮಾಣಿಕ ನಾಯಕರ ಪಟ್ಟಿ ಮಾಡಿ, ಒಬ್ಬೊಬ್ಬರನ್ನಾಗಿ ಕರೆತಂದು ಜವಾಬ್ದಾರಿ ನೀಡಿದರೆ ಖಂಡಿತವಾಗಿಯೂ ಜೆಡಿಎಸ್ ಮುಂದಿನ ಚುನಾವಣೆಯಲ್ಲಿ ಇಟ್ಟಿರುವ ನಿರೀಕ್ಷೆ ಗುರಿಯನ್ನು ಸಾಧಿಸಬಹುದು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದೆ.

ವಿರೋಧ ಪಕ್ಷಗಳಿಗೆ ಕೆಲಸಗಳಲ್ಲಿಯೇ ಉತ್ತರ ನೀಡುವ ತಳಮಟ್ಟದ ನಾಯಕರು ಜೆಡಿಎಸ್ ಗೆ ಅಗತ್ಯವಾಗಿದೆ. ಕೆಲಸದ ಜೊತೆಗೆ ಪ್ರಾಮಾಣಿಕತೆ, ಹೃದಯವಂತಿಕೆ ಇರುವ ಪ್ರವೀಣ್ ಕುಮಾರ್ ಅವರಂತಹ ನಾಯಕರನ್ನು ಪಕ್ಷ ಗುರುತಿಸಿದರೆ, ಹಳ್ಳಿಹಳ್ಳಿಗೂ ಜೆಡಿಎಸ್ ತಲುಪುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ಇತ್ತೀಚೆಗೆ ಹಾಸನದಲ್ಲಿ ಕಮಲ ಅರಳಲಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಇಂತಹ ಮಾತುಗಳಿಗೆ ಪಕ್ಷ ಸಂಘಟನೆಯ ಮೂಲಕವೇ ತಿರುಗೇಟು ನೀಡಲು ಪ್ರವೀಣ್ ಕುಮಾರ್ ಅವರು ಮುಂದಾಗಿದ್ದಾರೆ. ಈಗಾಗಲೇ ಹೊಸ ಹೊಸ ಜನರನ್ನು ಪಕ್ಷಕ್ಕೆ ಕರೆತರಲು, ಕಾರ್ಯಕರ್ತರ ಬಲ ಹೆಚ್ಚಿಸುವಲ್ಲಿ ಪ್ರವೀಣ್ ಕುಮಾರ್ ಅವರು ನಿರತರಾಗಿದ್ದು, ಕಾರ್ಯಕರ್ತರು ಇವರಿಗೆ ಸಾಥ್ ನೀಡುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ