ಆಕ್ಸಿಜನ್ ಗಾಗಿ ಅರಳೀಮರದಡಿಯಲ್ಲಿ ಮಲಗಿದ ಕೊರೊನಾ ಸೋಂಕಿತರು!
ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ಆಡಳಿತದಲ್ಲಿ ನಲುಗಿದ್ದು, ಕೊರೊನಾ ಸಂಕಷ್ಟದಲ್ಲಿ ಜನರ ಗೋಳು ಕೇಳುವಂತಿಲ್ಲ. ಇದೀಗ ಇಲ್ಲಿನ ಬಹದ್ದೂರ್ ಗಾಂಜ್ ಪ್ರದೇಶದ ಶಹಜಹಾನ್ ಪುರದಲ್ಲಿ ನಡೆದ ಘಟನೆ ದೇಶಾದ್ಯಂತ ವ್ಯಾಪಕವಾಗಿ ಆಕ್ರೋಶಕ್ಕೆ ಕಾರಣವಾಗಿದೆ.
ಕೊರೊನಾ ಪಾಟಿಸಿವ್ ಬಂದಿರುವ ರೋಗಿಗಳನ್ನು ಅರಳೀಮರದ ಕೆಳಗಡೆ ಮಲಗಿಸಿದ ಘಟನೆ ನಡೆದಿದ್ದು, ಒಂದೇ ಕುಟುಂಬದ 6ಕ್ಕೂ ಅಧಿಕ ಮಂದಿ ಮರದ ಕೆಳಗೆ ಕ್ಯಾಂಪ್ ಹಾಕಿದ್ದಾರೆ.
ಉತ್ತರಪ್ರದೇಶದ ಬಿಜೆಪಿ ನಾಯಕರೊಬ್ಬರ ಹೇಳಿಕೆಗಳಿಂದ ಜನರು ಕೊರೊನಾ ವಿಚಾರದಲ್ಲಿ ಗೊಂದಲಕ್ಕೀಡಾಗುತ್ತಿದ್ದಾರೆ. ಸರ್ಕಾರದ ಬಳಿಯಲ್ಲಿ ಜನರಿಗೆ ಆಕ್ಸಿಜನ್ ಒದಗಿಸುವ ಶಕ್ತಿ ಇಲ್ಲದ ಕಾರಣ ಈ ರೀತಿಯಾಗಿ ಅಮಾಯಕ ಜನರನ್ನು ಮೋಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಕೊರೊನಾ ಸೋಂಕಿತರು ಅರಳಿಮರದಡಿಯಲ್ಲಿ ಕುಳಿತಿರುವ ವಿಡಿಯೋ, ಪೋಟೋಗಳು ವೈರಲ್ ಆದ ಬಳಿಕ ಸ್ಥಳೀಯ ಬಿಜೆಪಿ ಶಾಸಕ ರೋಷನ್ ಲಾಲ್ ವರ್ಮಾ ಸ್ಥಳೀಯರ ಜೊತೆಗೆ ಮಾತುಕತೆ ನಡೆಸಿ, ಸ್ಥಳಕ್ಕೆ ಆರೋಗ್ಯ ಕೇಂದ್ರದ ಅಧಿಕಾರಿಗಳನ್ನು ಕರೆಸಿ, ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.